ರಾತ್ರೋ ರಾತ್ರಿ ಫೇಮಸ್ಸಾಯ್ತು ಸೋಲೋ ಪ್ಲ್ಯಾಂಟ್: ಲೇಹ್ನಲ್ಲಿದೆ ಮೋದಿ ಹೇಳಿದ ಆ ಸಂಜೀವಿನಿ - ಪ್ರಧಾನಿ ನರೇಂದ್ರ ಮೋದಿ
🎬 Watch Now: Feature Video
ಹಿಮಾಲಯವೆಂದರೇನೇ ಅಚ್ಚರಿ. ಅಪರೂಪದ ಪ್ರಾಣಿ ಹಾಗೂ ಸಸ್ಯ ರಾಶಿ ಹೊಂದಿರುವ ತಾಣ. ಆಸ್ತಿಕರಿಗೆ ಸಾಕ್ಷಾತ್ ಶಿವ-ಪಾರ್ವತಿ ನೆಲೆಸಿರುವ ಕೈಲಾಸಗಿರಿ. ರಾಮ ರಾವಣನ ನಡುವೆ ಯುದ್ಧ ನಡೆದಾಗ ಲಕ್ಷ್ಮಣನ ಪ್ರಾಣ ಉಳಿಸಿದ ಸಂಜೀವಿನಿ ಇದ್ದದ್ದು ಹಿಮಾಲಯದಲ್ಲೇ. ಪ್ರಧಾನಿ ನರೇಂದ್ರ ಮೋದಿ ಅವರು ಕಾಶ್ಮೀರಿ ವಾಸಿಗಳಿಗೆ ಆತ್ಮಸ್ಥೈರ್ಯ ತುಂಬುವ ಸಲುವಾಗಿ ಗುರುವಾರ ಮಾಡಿದ ಭಾಷಣದಲ್ಲಿ ನವಯುಗದ ಸಂಜೀವಿನಿಯ ಹೆಸರನ್ನು ಉಲ್ಲೇಖಿಸಿದರು. ಮರಣ ಶಯ್ಯೆಯಲ್ಲಿರುವವರನ್ನು ಉಳಿಸುತ್ತದೆ ಎಂದು ಪುರಾಣಗಳಲ್ಲಿ ಉಲ್ಲೇಖವಾಗಿರುವ ಈ ಸಸ್ಯ ಇನ್ನೂ ಇದೆಯಾ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.