ಕೊಪ್ಪಳದಲ್ಲಿ ವ್ಯಾಪಾರ ಜೋರು....ಸಾಮಾಜಿಕ ಅಂತರಕ್ಕಿಲ್ಲ ಇಲ್ಲಿ ಕಿಮ್ಮತ್ತು - no social Distance in apmc market
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6918257-thumbnail-3x2-koppala.jpg)
ಕೊರೊನಾ ಭೀತಿ ಹಿನ್ನೆಲೆಯಲ್ಲಿ ಲಾಕ್ಡೌನ್ ಮುಂದುವರೆದಿದ್ದು, ಕೆಲ ಕ್ಷೇತ್ರಗಳಿಗೆ ಸರ್ಕಾರ ವಿನಾಯಿತಿ ನೀಡಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಕೃಷಿ ಉತ್ಪನ್ನ, ಅಗತ್ಯ ವಸ್ತುಗಳ ಮಾರಾಟ ಮಾಡಬೇಕು ಎಂಬ ಸೂಚನೆಯೂ ಇದೆ. ಆದ್ರೆ, ಕೊಪ್ಪಳದಲ್ಲಿ ಮಾತ್ರ ನಿಯಮಗಳು ಇದ್ದೂ ಇಲ್ಲದಂತಾಗಿದೆ. ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ವ್ಯಾಪಾರ ವಹಿವಾಟು ನಡೆಸಿದರು. ಎಪಿಎಂಸಿಯಲ್ಲಿ ತರಕಾರಿಯನ್ನು ಈಗ ಕೇವಲ ಹೋಲ್ ಸೇಲ್ ನಲ್ಲಿ ವ್ಯಾಪಾರ ಮಾಡಲು ಅನುಮತಿ ಇದೆ. ಆದರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ವ್ಯಾಪಾರ-ವಹಿವಾಟು ನಡೆಸಿದ್ದು, ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.