ಗ್ರಾಮ ಪಂಚಾಯ್ತಿ ಚುನಾವಣೆ: ಮತಕೇಂದ್ರದ ಬಳಿ ಹಣ ಹಂಚಿಕೆ - ವಿಡಿಯೋ - ಮತಕೇಂದ್ರದ ಬಳಿ ಮತದಾರರಿಗೆ ಹಣ ಹಂಚಿಕೆ ಆರೋಪ
🎬 Watch Now: Feature Video
ಇಂದು ಗ್ರಾಮ ಪಂಚಾಯ್ತಿ ಮೊದಲ ಹಂತದ ಚುನಾವಣೆ ನಡೆಯುತ್ತಿದ್ದು, ಮತಗಟ್ಟೆ ಬಳಿ ಮತದಾರರಿಗೆ ಹಣ ಹಂಚಿಕೆ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಅರಕೇರಾ ಗ್ರಾಮದ ಮತ ಕೇಂದ್ರದ ಬಳಿ ಈ ದೃಶ್ಯ ಕಂಡು ಬಂದಿದೆ. ಒಂದು ಮತಕ್ಕೆ 500 ರೂ. ನೀಡಿ ಆಮಿಷ ಒಡ್ಡಲಾಗುತ್ತಿದೆ ಎನ್ನಲಾಗಿದೆ. ಪೊಲೀಸರ ಭಯವಿಲ್ಲದೇ ಹಣ ಹಂಚಿಕೆ ಮಾಡುತ್ತಿದ್ದು, ದುಡ್ಡು ಕೊಟ್ಟು ಅಭ್ಯರ್ಥಿಗಳು ವೋಟ್ ಪಡೆಯುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.