ಪಾವಗಡ ಶನಿಮಹಾತ್ಮನಿಗೆ ಅರ್ಪಿತವಾಯ್ತು ನೂತನ ಬೆಳ್ಳಿ ಅಡ್ಡಪಲ್ಲಕ್ಕಿ ರಥ - ಪಾವಗಡ ಶನಿಮಹಾತ್ಮ ಸ್ವಾಮಿ ನೂತನ ಬೆಳ್ಳಿ ರಥ
🎬 Watch Now: Feature Video
ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದ ಹೃದಯ ಭಾಗದಲ್ಲಿ ನೆಲೆಸಿರುವ ಶನಿಮಹಾತ್ಮ ಸ್ವಾಮಿಗೆ 2.25 ಕೋಟಿಯ ನೂತನ ಬೆಳ್ಳಿ ಅಡ್ಡ ಪಲ್ಲಕ್ಕಿಯ ರಥ ಇಂದು ಸಮರ್ಪಣೆ ಮಾಡಲಾಯಿತು. 280 ಕೆಜಿ ಪಂಚಲೋಹ, 75 ಕೆಜಿ ತಾಮ್ರ, 288 ಕೆಜಿ ಹಿತ್ತಾಳೆ, 380 ಕೆಜಿ ಬೆಳ್ಳಿ, 1 ಕೆಜಿ ಬಂಗಾರದ ಲೇಪನದಿಂದ ತಯಾರಿಸಲ್ಪಟ್ಟ ನೂತನ ರಥಕ್ಕೆ ಹಲವು ಪೂಜೆಗಳನ್ನು ನೆರವೇರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯ್ತು.