ರಾಯಚೂರಿನಲ್ಲಿ ಕೊರೊನಾ ಭೀತಿ: ರೋಗ ತಡೆಗಟ್ಟಲು ರಿಮ್ಸ್ನಲ್ಲಿ ಸಕಲ ಸನ್ನದ್ಧ - ಕೊರನಾ ವೈರಸ್ ಕರ್ನಾಟಕ
🎬 Watch Now: Feature Video
ರಾಯಚೂರು: ಜಗತನ್ನೇ ಬೆಚ್ಚಿ ಬೀಳಿಸಿರುವ ಕೊರೊನಾ ವೈರಸ್ ಇದೀಗ ಹೈದರಾಬಾದ್ಗೆ ಕಾಲಿಟ್ಟಿದ್ದು, ರಾಜ್ಯದ ಗಡಿ ಜಿಲ್ಲೆ ರಾಯಚೂರಿನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ನಗರದ ರಿಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ವೈರಸ್ ಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಿತ್ಯ ಸಾವಿರಾರು ಜನ ತೆಲಂಗಾಣ ಮತ್ತು ರಾಯಚೂರಿಗೆ ಪ್ರಯಾಣ ಬೆಳಸುತ್ತಿದ್ದು, ಜಿಲ್ಲೆಯ ಜನರಲ್ಲಿ ಕೊರೊನಾ ಬಗ್ಗೆ ತೀವ್ರ ಆತಂಕ ಉಂಟು ಮಾಡಿದೆ. ಈ ನಿಟ್ಟಿನಲ್ಲಿ ರಿಮ್ಸ್ ಆಸ್ಪತ್ರೆ, ಕೊರೊನಾ ವೈರಸ್ ಚಿಕಿತ್ಸೆಯ ಬಗ್ಗೆ ವಿಶೇಷ ಕಾಳಜಿ ವಹಿಸಿ ಜನರನ್ನು ರಕ್ಷಿಸಲು ಸಕಲ ಸಿದ್ಧತೆ ನಡೆಸಿದೆ.