ಕೊಪ್ಪಳದಲ್ಲಿ ಮಳೆ ಅಬ್ಬರಕ್ಕೆ ನೆಲಕಚ್ಚಿತು ನೂರಾರು ಎಕರೆಯಲ್ಲಿನ ಭತ್ತ: ರೈತರು ಕಂಗಾಲು - heavy rain in koppala
🎬 Watch Now: Feature Video
ಕೊಪ್ಪಳ ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅನೇಕ ಅವಾಂತರಗಳು ಸೃಷ್ಟಿಯಾಗಿವೆ. ಧಾರಾಕಾರ ಮಳೆ ಹಾಗೂ ಗಾಳಿಗೆ ಇನ್ನು 15 ದಿನಗಳಲ್ಲಿ ಕಟಾವಿಗೆ ಬರಬೇಕಾಗಿದ್ದ ನೂರಾರು ಎಕರೆಯಲ್ಲಿನ ಭತ್ತದ ಬೆಳೆ ನೆಲ ಕಚ್ಚಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಕೊಪ್ಪಳ ತಾಲೂಕಿನ ಗುಳದಳ್ಳಿ, ಬೇವಿನಹಳ್ಳಿ, ಬೂದಗುಂಪಾ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಭತ್ತದ ಬೆಳೆ ಹಾನಿಯಾಗಿದೆ. ತುಸು ಎತ್ತರವಾಗಿ ಬೆಳೆಯುವ ಆರ್ಎನ್ಆರ್ ತಳಿಯ ಭತ್ತ ನೆಲಕಚ್ಚಿದ್ದು, ಈಗ ರೈತರು ಕಣ್ಣೀರಿಡುವಂತಾಗಿದೆ. ಆದರೆ ಈವರೆಗೂ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲವೆಂದು ರೈತರು ಈಟಿವಿ ಭಾರತ ಬಳಿ ಅಳಲು ತೋಡಿಕೊಂಡಿದ್ದಾರೆ.