ಕುಟುಂಬದ ಆಧಾರವಾಗಿದ್ದ ಎತ್ತು ಮರಣ ಹೊಂದಿದ್ದಕ್ಕೆ ಬಿಕ್ಕಿ ಬಿಕ್ಕಿ ಅತ್ತ ರೈತ - Haveri latest news
🎬 Watch Now: Feature Video
ಹಾವೇರಿ: ರೈಲ್ವೆ ಕೆಳ ಸೇತುವೆ ದಾಟುವ ವೇಳೆ ನೀರಿನಲ್ಲಿ ಮುಳುಗಿ ಎತ್ತೊಂದು ಸಾವನ್ನಪ್ಪಿದ ಘಟನೆ ಹಾವೇರಿ ತಾಲೂಕಿನ ಕೋಳೂರು ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಮತ್ತೊಂದು ಎತ್ತು ಪಾರಾಗಿದ್ದು ಚಕ್ಕಡಿ ಓಡಿಸುತ್ತಿದ್ದ ವ್ಯಕ್ತಿ ಅಸ್ವಸ್ಥಗೊಂಡಿದ್ದಾನೆ. ಅಸ್ವಸ್ಥಗೊಂಡ ವ್ಯಕ್ತಿಯನ್ನ ಅಲ್ತಾಫ ವಜೀರಸಾಬ್ ಸವಣೂರು ಎಂದು ಗುರುತಿಸಲಾಗಿದೆ. ಗುರುವಾರ ಸಂಜೆ ಸುರಿದ ಧಾರಾಕಾರ ಮಳೆಗೆ ಕೆಳ ಸೇತುವೆಯಲ್ಲಿ ನೀರು ತುಂಬಿತ್ತು. ಶುಕ್ರವಾರ ಮುಂಜಾನೆ ಜಮೀನಿಗೆ ಅಲ್ತಾಫ್ ಚಕ್ಕಡಿ ಕಟ್ಟಿಕೊಂಡು ರೈಲ್ವೆ ಕೆಳ ಸೇತುವೆ ದಾಟುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಘಟನೆಯಲ್ಲಿ ಅಸ್ವಸ್ಥಗೊಂಡ ಅಲ್ತಾಫ್‌ನ್ನ ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.