ಸಿ.ಪಿ. ಯೋಗೀಶ್ವರ್ಗೆ ಸಚಿವ ಸ್ಥಾನ ನೀಡದಂತೆ ಮೂಲ ಬಿಜೆಪಿಗರ ಒತ್ತಾಯ - ಬಿಜೆಪಿಯಲ್ಲಿ ದೊಡ್ಡ ಮಟ್ಟದ ಅಸಮಧಾನ
🎬 Watch Now: Feature Video
ಬೆಂಗಳೂರು: ಮಾಜಿ ಸಚಿವ ಸಿ.ಪಿ. ಯೋಗೀಶ್ವರ್ಗೆ ಸಚಿವ ಸ್ಥಾನ ನೀಡುವುದಕ್ಕೆ ಬಿಜೆಪಿಯಲ್ಲಿ ದೊಡ್ಡ ಮಟ್ಟದ ಅಸಮಾಧಾನ ವ್ಯಕ್ತವಾಗಿದ್ದು, ಯಾವುದೇ ಕಾರಣಕ್ಕೂ ಸೋತವರನ್ನು ಸಂಪುಟಕ್ಕೆ ತೆಗೆದುಕೊಳ್ಳಬಾರದು ಎನ್ನುವ ಮಾತು ಕೇಳಿ ಬರುತ್ತಿದೆ. ಈ ವಿಷಯವನ್ನು ಪ್ರತ್ಯೇಕ ಸಭೆ ಮೂಲಕ ಹೈಕಮಾಂಡ್ಗೆ ತಲುಪಿಸುವಲ್ಲಿ ಕೆಲ ಮುಖಂಡರು ಸಫಲರಾಗಿದ್ದಾರೆ. ಮೂಲ ಬಿಜೆಪಿ ನಾಯಕರ ವಿರೋಧದ ನಡುವೆ ಸೈನಿಕನಿಗೆ ಸಂಪುಟದಲ್ಲಿ ಸ್ಥಾನ ಸಿಗುತ್ತೋ ಇಲ್ವೋ ಎಂಬುದನ್ನು ಕಾದು ನೋಡಬೇಕಿದೆ.