ಚಿತ್ರ ಮಂದಿರಗಳ ಪರದೆ ಸರಿಸಲು ಮಾಲೀಕರ ಹಿಂದೇಟು: ಅಸಲಿಗೆ ಕಾರಣ ಏನಿರಬಹುದು? - film theaters owners news
🎬 Watch Now: Feature Video
ಹಾಸನ : ಕೊರೊನಾ ಹಿನ್ನೆಲೆ ಕಳೆದ ಏಳು ತಿಂಗಳಿನಿಂದ ಬಂದ್ ಆಗಿದ್ದ ಚಿತ್ರಮಂದಿರಗಳನ್ನು ಹೊಸ ಮಾರ್ಗಸೂಚಿ ಅನ್ವಯ ಪುನಃ ತೆರೆಯಲು ಕೇಂದ್ರ ಸರ್ಕಾರ ಅನುಮತಿಯೇನೋ ನೀಡಿದೆ. ಆದರೆ, ಹಾಸನ ಜಿಲ್ಲೆಯಲ್ಲಿ ಇಷ್ಟು ದಿನಗಳ ಕಾಲ ಬಾಗಿಲು ಮುಚ್ಚಿದ್ದ ಚಿತ್ರ ಮಂದಿರಗಳ ಪರದೆ ಸರಿಸಲು ಮಾಲೀಕರು ಹಿಂದೇಟು ಹಾಕುತ್ತಿದ್ದಾರೆ. ಹತ್ತು ಹಲವು ಸಮಸ್ಯೆಗಳನ್ನು ಎದುರಿಗಿಡುತ್ತಿರುವ ಚಿತ್ರಮಂದಿರಗಳ ಮಾಲೀಕರು, ಶೇ. 100 ರಷ್ಟು ಪ್ರೇಕ್ಷಕರ ಪ್ರವೇಶಕ್ಕೆ ಅನುಮತಿ ಹಾಗೂ ಎನ್ಆರ್ಐ ವಿವಾದ ಇತ್ಯರ್ಥವಾಗುವವರೆಗೂ ಚಿತ್ರ ಪ್ರದರ್ಶನ ಬೇಡ ಎನ್ನುತ್ತಿದ್ದಾರೆ. ಚಿತ್ರ ಮಂದಿರಗಳನ್ನು ತೆರೆದರೆ ಏನಾಗುತ್ತೆ? ತೆರೆಯದಿದ್ದರೆ ಏನಾಗುತ್ತೆ ಎಂಬುದರ ಬಗ್ಗೆ ಚಿತ್ರಮಂದಿರಗಳ ಮಾಲೀಕರ ಬಾಯಿಂದಲೇ ಕೇಳಿ...