ಸಿಲಿಕಾನ್ ಸಿಟಿ ಜನರನ್ನ ನಿಯಂತ್ರಿಸಲು ರಸ್ತೆಯಲ್ಲಿ ಏಕಮುಖ ಸಂಚಾರ! - ಸಿಟಿ ಜನರನ್ನ ನಿಯಂತ್ರಿಸಲು ರಸ್ತೆಯಲ್ಲಿ ಏಕಮುಖ ಸಂಚಾರ
🎬 Watch Now: Feature Video
ಲಾಕ್ಡೌನ್ ಇದ್ರೂ ಕೇರ್ ಮಾಡದ ಬೆಂಗಳೂರು ಜನ ರಸ್ತೆಗಿಳಿಯೋದನ್ನು ಬಿಡಲಿಲ್ಲ. ಜನಸಂಚಾರ ತಡೆಯೋಕೆ ಪೊಲೀಸರು ವಾಹನಗಳನ್ನ ಸೀಜ್ ಮಾಡಿದ್ದು ಆಯ್ತು, ಲಾಠಿಚಾರ್ಜ್ ಮಾಡಿದ್ದೂ ಆಯ್ತು. ಆದ್ರೂ ಜನ ಬಗ್ಗಲಿಲ್ಲ. ಹೀಗಾಗಿ ಒಂದು ಹೆಜ್ಜೆ ಮುಂದೆ ಹೋಗಿ ಖಾಕಿ ಈಗ ನಗರದಾದ್ಯಂತ ಏಕಮುಖ ಸಂಚಾರ ವ್ಯವಸ್ಥೆ ಮಾಡಿದೆ. ನಗರದಲ್ಲಿ ಪಾಸ್ ಇಲ್ಲದ ವಾಹನಗಳೇ ಹೆಚ್ಚು ಓಡಾಟ ಮಾಡ್ತಿವೆ. ಇದನ್ನು ತಪ್ಪಿಸಲು ಈ ನಿಯಮ ತರಲಾಗಿದೆ. ಒಂದೇ ರಸ್ತೆಯಲ್ಲಿ ಎರಡು ಕಡೆ ಓಡಾಟ ಮಾಡುವ ವಾಹನಗಳನ್ನ ಹಿಡಿದು ಪೊಲೀಸರು ದಂಡ ಹಾಕಿ ಸೀಜ್ ಮಾಡ್ತಿದ್ದಾರೆ.