ಭಾರತ್​ ಬಂದ್​: ಮಂಡ್ಯದಲ್ಲಿ ನೋ ಬಂದ್​, ಎಂದಿನಂತೆ ಜನಜೀವನ - farmers protest

🎬 Watch Now: Feature Video

thumbnail

By

Published : Mar 26, 2021, 12:22 PM IST

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಸಂಯುಕ್ತ ಕಿಸಾನ್​ ಮೋರ್ಚಾ ರೈತ ಸಂಘಟನೆ ಕರೆ ನೀಡಿದ್ದ ಭಾರತ್‌ ಬಂದ್‌ಗೆ ಸಕ್ಕರೆ ನಾಡಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಂಡ್ಯ ನಗರದಲ್ಲಿ ಮಾತ್ರ ಎಂದಿನಂತೆ ಕೆಎಸ್​ಆರ್​ಟಿಸಿ ಬಸ್, ಆಟೋ ಸಂಚಾರ ಸಾಗಿದೆ. ನಗರದ ಅಂಗಡಿ - ಮುಂಗಟ್ಟುಗಳು, ಹೋಟೆಲ್​ಗಳು ಸೇರಿದಂತೆ ಮಾರುಕಟ್ಟೆಯಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ನಡೆಯುತ್ತಿದೆ. ಸದ್ಯ ಮಂಡ್ಯದ ಸಂಜಯ್ ವೃತ್ತದ ಬಳಿ ಮಾನವ ಸರಪಳಿ ಮೂಲಕ ಹೆದ್ದಾರಿ ತಡೆದು ಕೆಂಪೂಗೌಡ ನೇತೃತ್ವದಲ್ಲಿ ರೈತರು ಬೆಂಗಳೂರು - ಮೈಸೂರು ರಸ್ತೆಯಲ್ಲಿ ಸ್ವಯಂ ಪ್ರೇರಿತವಾಗಿ ರಸ್ತೆಗಿಳಿದು, ರೈತ ಹೋರಾಟಕ್ಕೆ ಬೆಂಬಲ ನೀಡದ ಸಂಘಟನೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಹೆದ್ದಾರಿ ತಡೆದು ಪ್ರತಿಭಟನೆಗೆ ಮುಂದಾಗಿದ್ದ ರೈತರನ್ನು ಪೊಲೀಸರು ಮನವೊಲಿಸಿ ಪ್ರತಿಭಟನೆಯನ್ನ ನಿಲ್ಲಿಸಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.