ಭಾನುವಾರ ಲಾಕ್‌ಡೌನ್ ಅಗತ್ಯ ಇರಲಿಲ್ಲ: ಸ್ಥಳೀಯರ ಅಭಿಪ್ರಾಯ..!
🎬 Watch Now: Feature Video
ಕೊಡಗು: ದೇಶದಾದ್ಯಂತ ಕೊರೊನಾ ಆರ್ಭಟ ಮುಂದುವರೆದಿದೆ. ಶರ ವೇಗದಲ್ಲಿ ಪಸರಿಸುತ್ತಿರುವ ಸೋಂಕು ತಡೆಗಟ್ಟಲು ರಾಜ್ಯ ಸರ್ಕಾರ ಕೆಲವೊಂದು ಮಹತ್ವದ ಕ್ರಮಗಳನ್ನು ತೆಗೆದುಕೊಂಡಿದೆ. ರಾತ್ರಿ 8 ಗಂಟೆಯಿಂದ ಬೆಳಗ್ಗೆ 5 ರವರೆಗೆ ಕರ್ಪ್ಯೂ ಜಾರಿಗೊಳಿಸಿದೆ. ಅಲ್ಲದೆ ವಾರದ ಪ್ರತಿ ಭಾನುವಾರ ಸಂಪೂರ್ಣ ಲಾಕ್‌ಡೌನ್ ಘೋಷಿಸಿದೆ. ಈಗಾಗಲೇ ಕೊಡಗಿನಲ್ಲಿ ಚೇಂಬರ್ ಆಫ್ ಕಾಮರ್ಸ್ ಅಸೋಸಿಯೇಷನ್ ಯೂನಿಯನ್ ವತಿಯಿಂದ ಮಧ್ಯಾಹ್ನ 2 ರಿಂದ ಬೆಳಗ್ಗೆ 6 ರವರೆಗೆ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ಅಂಗಡಿ-ಮುಂಗಟ್ಟು ವ್ಯಾಪಾರವನ್ನು ನೆನ್ನೆಯಿಂದ ಜೂನ್4 ರವರೆಗೆ ಸ್ಥಗಿತಗೊಳಿಸಿದೆ. ರಾಜ್ಯ ಸರ್ಕಾರದ ಇಂತಹ ನಿರ್ಧಾರ ಪ್ರಸ್ತುತವೇ ಎಂಬುದರ ಬಗ್ಗೆ ಸ್ಥಳೀಯರು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.