ನೆರೆಯಿಂದ ರಾತ್ರಿಪೂರ್ತಿ ಪಂಪ್ಹೌಸ್ನಲ್ಲಿ ಕಾಲ ಕಳೆದ ಇಬ್ಬರನ್ನ ರಕ್ಷಿಸಿದ ಎನ್ಡಿಆರ್ಎಫ್ - ಸ್ವರ್ಣ ನದಿಯ ಜಲವಿದ್ಯುತ್ ಘಟಕ
🎬 Watch Now: Feature Video
ಉಡುಪಿ : ಎನ್ಡಿಆರ್ಎಫ್ ತಂಡದಿಂದ ಸ್ವರ್ಣನದಿಯ ಜಲವಿದ್ಯುತ್ ಘಟಕದಲ್ಲಿ ಸಿಲುಕಿದವರ ರಕ್ಷಣೆ ಮಾಡಲಾಗಿದೆ. ಮಂಜು ಮತ್ತು ಗೋವಿಂದಾ ಎಂಬ ಇಬ್ಬರ ರಕ್ಷಿಸಲಾಗಿದೆ. ಎರಡು ದಿನಗಳ ನಿರಂತರ ಮಳೆಯಿಂದ ಉಕ್ಕಿ ಹರಿದ ಸುವರ್ಣಾ ನದಿಯ ಆರ್ಭಟದಿಂದ ಹಿರಿಯಡ್ಕದ ಬಜೆ ಸಮೀಪ ಅಣೆಕಟ್ಟಿನ ಪಕ್ಕದಲ್ಲಿರುವ ಜಲ ವಿದ್ಯುತ್ ಯೋಜನೆ ಘಟಕದಲ್ಲಿ ಸಿಕ್ಕಿ ಹಾಕಿಕೊಂಡ ಇಬ್ಬರು ಸಿಬ್ಬಂದಿ ರಕ್ಷಿಸಲಾಗಿದೆ. ಪಂಪ್ಹೌಸ್ನಲ್ಲಿ ರಾತ್ರಿ ಹೊತ್ತು ಮಲಗಿದ್ದ ಇಬ್ಬರು ಸಿಬ್ಬಂದಿ, ರಾತ್ರಿ ಏಕಾಏಕಿ ಉಕ್ಕೇರಿದ ನದಿಯಿಂದ ಆತಂಕಗೊಂಡಿದ್ದರು. ಪಂಪ್ಹೌಸ್ನ ನಾಲ್ಕು ಮೂಲೆಯಲ್ಲೂ ಆವರಿಸಿರುವ ನೀರಿನಿಂದ ಜನರೇಟರ್ ಮೇಲೆ ಕುಳಿತು ಜೀವ ಉಳಿಸಿಕೊಂಡಿದ್ದರು. ಇದೀಗ ಎನ್ಡಿಆರ್ಎಫ್ ತಂಡ ಇಬ್ಬರನ್ನು ರಕ್ಷಣೆ ಮಾಡಿದೆ.