ಶರನ್ನವರಾತ್ರಿ ಮಹೋತ್ಸವ: ನವದುರ್ಗೆಯರ ಅಲಂಕಾರದಲ್ಲಿ ಕಂಗೊಳಿಸಲಿದ್ದಾಳೆ ದೇವಿ - ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4592158-thumbnail-3x2-mng.jpg)
ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಶ್ರೀ ಮಾರ್ಕಂಡೇಶ್ವರ ದೇವಸ್ಥಾನದ ಆವರಣದಲ್ಲಿ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ ಆಯೋಜಿಸಿದ್ದ ಹತ್ತನೇ ವರ್ಷದ ಶರನ್ನವರಾತ್ರಿ ಮಹೋತ್ಸವಕ್ಕೆ ವಿಜೃಂಭಣೆಯಿಂದ ಚಾಲನೆ ದೊರೆತಿದೆ. ನವರಾತ್ರಿ ಉತ್ಸವಕ್ಕೆ ಶ್ರೀಕ್ಷೇತ್ರ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಜಿ.ಬಿ.ಗಿರಿಜಾ ಶಂಕರ ಜೋಷಿ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದು, ನವರಾತ್ರಿ ಶುಭ ಸಂದರ್ಭದಲ್ಲಿ ಜಗನ್ಮಾತೆಯ ಆರಾಧನೆಯಿಂದ ಸಕಲ ಐಶ್ವರ್ಯಗಳು ದೊರೆಯಲಿ. ದುರ್ಗಾ ಪೂಜೆಯಿಂದ ಜಗತ್ತಿಗೆ ಒಳಿತಾಗಲಿ. ಪಟ್ಟಣದಲ್ಲಿ ವಿಜೃಂಭಣೆಯಿಂದ ನವರಾತ್ರಿ ಪೂಜೆ ಆಚರಿಸುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು. ಶರನ್ನವರಾತ್ರಿ ಹಿನ್ನೆಲೆಯಲ್ಲಿ ಶ್ರೀದೇವಿಯನ್ನು ನವದುರ್ಗೆಯರ ಅಲಂಕಾರದಿಂದ ಆರಾಧಿಸಲಾಗುತ್ತಿದೆ. ಅದಲ್ಲದೇ ದೇವಿ ಸನ್ನಿಧಿಯಲ್ಲಿ ಅಷ್ಟಾವಧಾನ ಸೇವೆ, ಪಂಚದುರ್ಗಾ ಹೋಮ, ಶ್ರೀ ಮಹಾಲಕ್ಷ್ಮೀ ಮೂಲಮಂತ್ರ ಹೋಮ, ಶ್ರೀ ಪುರುಷಸೂಕ್ತ ಹೋಮ, ಶ್ರೀ ಸೂಕ್ತಹೋಮ, ಶ್ರೀ ಲಲಿತಾ ಮೂಲಮಂತ್ರ ಹೋಮ, ಸರಸ್ವತಿ ಮೂಲಮಂತ್ರ ಹೋಮ, ಶ್ರೀ ವಾಗೀಶ್ವರಿ ಮೂಲಮಂತ್ರ ಹೋಮ, ಶ್ರೀ ಶಾರದಾ ಪೂಜೆ, ಶ್ರೀ ದುರ್ಗಾ ಮೂಲಮಂತ್ರ ಹೋಮ, ಚಂಡಿಕಾ ಮೂಲಮಂತ್ರ ಹೋಮ, ಆಯುಧಪೂಜೆ, ವಿಜಯದಶಮಿ ವಿಜಯೋತ್ಸವ, ಸಪ್ತಶತಿ ಪಾರಾಯಣ, ಕುಂಕುಮಾರ್ಚನೆ, ರುದ್ರಹೋಮ, ಮಹಾಚಂಡಿ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳನ್ನು ಸಂಪ್ರದಾಯಬದ್ಧವಾಗಿ ನೆರವೇರಿಸಲಾಗುತ್ತಿದೆ.
Last Updated : Sep 29, 2019, 7:17 PM IST