ನಾಗರ ಪಂಚಮಿ: ಹಾವೇರಿಯಲ್ಲಿ ಮಣ್ಣಿನ ನಾಗ ಮೂರ್ತಿಯ ವ್ಯಾಪಾರ - The corona infection case
🎬 Watch Now: Feature Video
ಗುರುವಾರದಿಂದ ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ನಾಗರಪಂಚಮಿ ಆಚರಿಸಲಾಗುತ್ತದೆ. ಕೊರೊನಾ ಅಡೆತಡೆಗಳ ಮಧ್ಯೆಯೂ ಪಂಚಮಿ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಗುರುವಾರ ರೊಟ್ಟಿ ಪಂಚಮಿ, ಶುಕ್ರವಾರ ಕಲ್ಲುನಾಗರಕ್ಕೆ ಹಾಲೆರೆಯುವುದು ಹಾಗೂ ಶನಿವಾರ ಮನೆಯಲ್ಲಿನ ನಾಗನ ಮೂರ್ತಿಗಳಿಗೆ ಹಾಲೆರೆಯುವ ಪದ್ಧತಿ ಇದೆ. ಈ ಹಿನ್ನೆಲೆಯಲ್ಲಿ ಮಣ್ಣಿನ ನಾಗ ಮೂರ್ತಿ ತಯಾರಿಸುವ ಕುಟುಂಬಗಳು ಮೂರ್ತಿಗಳ ಮಾರಾಟ ಮಾಡುತ್ತಿವೆ. ನಗರದ ಪ್ರಮುಖ ರಸ್ತೆಗಳಲ್ಲಿ ಇವುಗಳ ಖರೀದಿ ಭರಾಟೆ ಜೋರಾಗಿತ್ತು.