ಸರಳವಾಗಿ ಮಹರ್ಷಿ ಭಗೀರಥ ಜಯಂತಿ ಆಚರಿಸಿದ ಶಾಸಕ ಎನ್ ಮಹೇಶ್.. - ಶಾಸಕ ಎನ್.ಮಹೇಶ್
🎬 Watch Now: Feature Video

ಕೊಳ್ಳೇಗಾಲದ ಸ್ವಗೃಹದಲ್ಲೇ ಶಾಸಕ ಎನ್ ಮಹೇಶ್ ಮಹರ್ಷಿ ಭಗೀರಥ ಜಯಂತಿಯನ್ನು ಸರಳವಾಗಿ ಆಚರಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಇಡೀ ದೇಶವನ್ನೇ ಕೊರೊನಾ ಸೋಂಕು ಕಾಡುತ್ತಿದೆ. 2ನೇ ಹಂತದ ಲಾಕ್ಡೌನ್ ಮೇ 3ಕ್ಕೆ ಮುಕ್ತಾಯವಾಗಲಿದೆ. ಇದರ ಅರ್ಥ ನಂತರ ಫ್ರೀಯಾಗಿ ಸುತ್ತಾಡಬಹುದು ಎಂದಲ್ಲ. ಶುಚಿತ್ವ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕುವುದಾಗಿದೆ. ಯಾವುದೇ ಲಕ್ಷಣಗಳಿಲ್ಲದೆ ಜನರಲ್ಲಿ ಸೋಂಕು ದೃಢವಾಗುತ್ತಿರುವುದು ಆತಂಕಕಾರಿ ವಿಷಯ. ಹಾಗಾಗಿ ಕೊರೊನಾ ಬಗ್ಗೆ ಎಚ್ಚರವಿರಲಿ ಎಂದು ತಿಳಿಸಿದರು.