ಪಿಯು ವಿಜ್ಞಾನ ವಿಭಾಗದಲ್ಲಿ 588 ಅಂಕ ಗಳಿಸಿ ಮೈಸೂರು ಜಿಲ್ಲೆಗೆ ಕೀರ್ತಿ ತಂದ ಶರಣ್ ದೀಪ್ - undefined
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/images/320-214-3006705-thumbnail-3x2-wddfghfdfd.jpg)
ಮೈಸೂರು: ಇಂದು ಪಿಯುಸಿ ಪರೀಕ್ಷೆ ಫಲಿತಾಂಶ ಹೊರ ಬಿದ್ದದ್ದು, ಸದ್ವಿದ್ಯಾ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಶರಣ್ ದೀಪ್ ಎಂಬ ವಿದ್ಯಾರ್ಥಿ ವಿಜ್ಞಾನ ವಿಭಾಗದಲ್ಲಿ ಸುಮಾರು 588 ಅಂಕಗಳನ್ನು ಗಳಿಸುವ ಮೂಲಕ ಜಿಲ್ಲೆಗೆ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಶರಣ್ ದೀಪ್, ನನ್ನ ಸಾಧನೆಗೆ ನನ್ನ ತಾಯಿಯೇ ಕಾರಣ. ಪರೀಕ್ಷೆಯ ಸಮಯದಲ್ಲಿ ಕರೆಂಟ್ ಹೋದಾಗ ನನ್ನ ತಾಯಿಯೇ ಬೀಸಣಿಕೆಯಿಂದ ಗಾಳಿ ಬೀಸಿದ್ದು. ನನ್ನ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದರು ಎಂದು ತಮ್ಮ ಅಭಿಪ್ರಾಯವನ್ನು 'ಈಟಿವಿ ಭಾರತ್'ನೊಂದಿಗೆ ಹಂಚಿಕೊಂಡರು.