ವಿದ್ಯುತ್ ದೀಪಾಲಂಕಾರದಿಂದ ಜಗಮಗಿಸುತ್ತಿರುವ ಮೈಸೂರು ಅರಮನೆ: ಹರಿದು ಬಂದ ಜನಸಾಗರ - Mysore
🎬 Watch Now: Feature Video
ಜಗತ್ಪ್ರಸಿದ್ದ ಮೈಸೂರು ಅರಮನೆ ವಿದ್ಯುತ್ ದೀಪಾಲಂಕಾರ ಪುನಾರಂಭವಾಗಿದೆ. 3 ತಿಂಗಳ ಬಳಿಕ ಜಗಮಗಿಸುತ್ತಿರುವ ಅರಮನೆ ಬೆಳಕನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದು ಬಂದಿದೆ. ಕೋವಿಡ್ನಿಂದ ಸ್ಥಗಿತಗೊಂಡಿದ್ದ ದೀಪಾಲಂಕಾರ ಜು.25 ರಿಂದ ಮತ್ತೆ ಆರಂಭಗೊಂಡಿದ್ದು, ಪ್ರತಿ ಭಾನುವಾರ ಹಾಗೂ ಸಾರ್ವತ್ರಿಕ ರಜಾ ದಿನಗಳಂದು ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತದೆ. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7 ರಿಂದ 8 ಹಾಗೂ ಶನಿವಾರ 7 ರಿಂದ 9.15ರ ವರಗೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ನಡೆಯಲಿದೆ.