ನಾಡಹಬ್ಬ ದಸರಾ: ಮೋಡಿ ಮಾಡಿದ ಸಂಗೀತ ಕಾರ್ಯಕ್ರಮ - ಸಾಂಸ್ಕೃತಿಕ ಕಾರ್ಯಕ್ರಮ
🎬 Watch Now: Feature Video
ಮೈಸೂರು: ನಾಡಹಬ್ಬ ಮೈಸೂರು ದಸರಾದ ಸಡಗರ ಕಳೆಗಟ್ಟಿದ್ದು, ಪ್ರತಿದಿನವೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಿವೆ. ಬುಧವಾರ ರಾತ್ರಿ ಅರಮನೆ ವೇದಿಕೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ಈ ವೇಳೆ ಜಯಚಾಮರಾಜ ಒಡೆಯರ್ ಅವರ ಆಯ್ದ ಕೆಲವು ಕೃತಿಗಳ ಹಾಡುಗಳು ನೆರೆದಿದ್ದವರನ್ನು ಸಂಗೀತ ಲೋಕದಲ್ಲಿ ಮುಳುಗಿಸಿದವು. ಬೆಂಗಳೂರಿನ ವೆಂಕಟರಾಘವನ್ ಅವರ ತಂಡ ಕಾರ್ಯಕ್ರಮ ನಡೆಸಿಕೊಟ್ಟಿತು. ಗಾಯಕಿ ಜಯ ಜಾನಕಿ ರಮಣ ಅವರ ತಂಡ ಹಾಗೂ ಬೆಂಗಳೂರಿನ ಡಾ. ಸುಮಾ ಸುಧೀಂದ್ರ ಹಾಗೂ ತಂಡದ ಸುಮಧುರ ಸಂಗೀತ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.
Last Updated : Oct 3, 2019, 8:58 AM IST