ರಾಜಕೀಯ ವಿರೋಧವಿದ್ರೂ 'ಮೈ ಶುಗರ್' ಪ್ರಾರಂಭವಾಗುತ್ತೆ : ಸಂಸದೆ ಸುಮಲತಾ ಅಂಬರೀಶ್ ಭರವಸೆ - my sugar factory reopen latest news
🎬 Watch Now: Feature Video
ಈ ವರ್ಷದಲ್ಲಿ ಮೈ ಶುಗರ್ ಕಾರ್ಖಾನೆ ಆರಂಭವಾಗುತ್ತದೆ. ರಾಜಕೀಯ ವಿರೋಧ ಎಷ್ಟೇ ಇದ್ರೂ ಸಹ ನಾನು ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ನಾನು ಕೊಟ್ಟ ಮಾತಿನ ಪ್ರಕಾರ ಮಂಡ್ಯದ ಮೈ ಶುಗರ್ ಕಾರ್ಖಾನೆ ಪುನಾರಂಭವಾಗುತ್ತದೆ. ಈ ಬಗ್ಗೆ ರಾಜ್ಯ ಸರ್ಕಾರದ ಮೇಲೂ ಒತ್ತಡ ತರುತ್ತಿದ್ದೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ತಿಳಿಸಿದ್ದಾರೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕೇಂದ್ರ ಪುರಸ್ಕೃತ ಅಮೃತ್ ಯೋಜನೆಯ ಕಾಮಗಾರಿ ವೀಕ್ಷಣೆ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದ್ರು. ಟೆಂಡರ್‌ನಲ್ಲಿ ಸ್ಪಲ್ಪ ವ್ಯತ್ಯಾಸ ಆಗಿದೆ, ಇದನ್ನು ಸರಿ ಪಡಿಸಿಕೊಂಡು ಕಾರ್ಖಾನೆಯನ್ನು ಪುನಾರಂಭಿಸಲಾಗುತ್ತದೆ ಎಂದು ಸಂಸದೆ ಸುಮಲತಾ ಅಂಬರೀಶ್ ತಿಳಿಸಿದರು.