ರಾತ್ರೋರಾತ್ರಿ ಬೀರು ಹೊತ್ತೊಯ್ದ ದರೋಡೆಕೋರರು.. ದೋಚಿರೋದಿಷ್ಟು_ - ಹೋಂ ಥಿಯೇಟರ್ ಮೊಬೈಲ್ ಕಳ್ಳತನ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4567019-thumbnail-3x2-surya.jpg)
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಮಾದರಹಳ್ಳಿಯಲ್ಲಿ ಸರಣಿ ಕಳ್ಳತನ ನಡೆದಿದ್ದು, ಕಳೆದ ರಾತ್ರಿ ಕಳ್ಳರು ಮನೆಯಿಂದ ಗೋದ್ರೇಜ್ ಬೀರುವನ್ನು ಹೊತ್ತೊಯ್ದು ಸುಮಾರು ಮೂವತ್ತು ಸಾವಿರ ನಗದು ಹಾಗೂ 100 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಗ್ರಾಮದ ಮಹೇಶ್ ಎಂಬುವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಮನೆಯಿಂದ 100 ಮೀಟರ್ ತನಕ ಬೀರು ಹೊತ್ತೊಯ್ದು ಹಣ ಹಾಗೂ ಆಭರಣ ದೋಚಿ ಬೀರುವನ್ನು ಅಲ್ಲಿಯೇ ಬಿಸಾಡಿ ಹೋಗಿದ್ದಾರೆ. ಇನ್ನು, ತಿಪ್ಪೇಶಿ ಎಂಬುವರ ಮನೆಯಲ್ಲಿ ಹೋಂ ಥಿಯೇಟರ್ ಹಾಗೂ ಮೊಬೈಲ್ ಕದ್ದೊಯ್ದಿದ್ದಾರೆ. ದೊಡ್ಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳ್ಳರ ಪತ್ತೆಗೆ ಖಾಕಿ ಬಲೆ ಬೀಸಿದೆ.