ಹಿಂದೂ - ಮುಸ್ಲಿಂ ಭಾವೈಕ್ಯತೆಯ ಮೊಹರಂ ಹಬ್ಬ: ಕೆಂಡ ತುಳಿದು ಭಕ್ತಿ ಸಮರ್ಪಣೆ - ಮುಸ್ಲಿಂ ಧರ್ಮ
🎬 Watch Now: Feature Video
ರಾಣೆಬೆನ್ನೂರು: ಹಿಂದೂ- ಮುಸ್ಲಿಂ ಸಮುದಾಯ ಬಾಂದವರು ಕೂಡಿ ಆಚರಿಸುವ ಭಾವಕೈತೆ ಹಬ್ಬ ಮೊಹರಂ ಅನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ನಗರ ಸೇರಿದಂತೆ ತಾಲೂಕಿನ ನಾಗೇನಹಳ್ಳಿ ಮುದೇನೂರು, ಮಾಕನೂರು, ಚಿಕ್ಕಹರಳಹಳ್ಳಿ ಗ್ರಾಮದಲ್ಲಿ ಅಷ್ಟೇನು ಮುಸ್ಲಿಂ ಧರ್ಮದವರು ಇಲ್ಲದಿದ್ದರೂ, ಹಿಂದೂಗಳೇ ಜೊತೆಗೂಡಿ ಅದ್ದೂರಿಯಾಗಿ ಮೊಹರಂ ಹಬ್ಬ ಆಚರಿಸಿದರು. ಹಬ್ಬದ ಸಮಯದಲ್ಲಿ ಡೋಲು, ಕುಣಿತ, ಕೋಲಾಟ, ಗೆಜ್ಜೆಮೇಳ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಕಣ್ಮನ ಸೆಳೆದವು. ಅಲೈ ಸ್ವಾಮಿಗೆ ಮುಸ್ಲಿಂ ಹಾಗೂ ಹಿಂದೂ ಸಂಪ್ರದಾಯದ ಮೂಲಕ ಪೂಜೆ ನೇರೆವೇರಿಸಲಾಯಿತು.