ಆಶಾ ಕಾರ್ಯಕರ್ತೆಯರಿಗೆ ಪಡಿತರ ವಿತರಿಸಿದ ಶಾಸಕ ಸುನಿಲ್‌ಕುಮಾರ್! - ಆಶಾ ಕಾರ್ಯಕರ್ತೆಯರು
🎬 Watch Now: Feature Video

ಕೊರೊನಾ ಲಾಕ್ಡೌನ್ ಹಿನ್ನೆಲೆ ಸರ್ಕಾರದ ಕಾಲಾಳುಗಳಾಗಿ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರನ್ನು ಶಾಸಕ ಸುನಿಲ್‌ಕುಮಾರ್ ಗುರುತಿಸಿ ಗೌರವಿಸಿದ್ದಾರೆ. ಸುಮಾರು 25 ಆಶಾ ಕಾರ್ಯಕರ್ತೆಯರ ಮನೆಗೆ ಶಾಸಕರು ಖುದ್ದು ಭೇಟಿ ನೀಡಿ ಎರಡೂವರೆ ಸಾವಿರ ಮೌಲ್ಯದ ಪಡಿತರ ವಿತರಿಸಿದ್ದಾರೆ. ಇದರ ಜೊತೆ ಆಶಾ ಕಾರ್ಯಕರ್ತೆಯರ ನಿಸ್ವಾರ್ಥ ಸೇವೆ ಗುರುತಿಸಿ ಅಭಿನಂದನಾ ಪತ್ರ ನೀಡಿ ಗೌರವಿಸಿದ್ದಾರೆ. ಉಳಿದ ಆಶಾ ಕಾರ್ಯಕರ್ತೆಯರ ಮನೆಗೆ ಪಕ್ಷದ ಸ್ವಯಂ ಸೇವಕರು ದಿನಸಿ ಸಾಮಾಗ್ರಿಗಳನ್ನು ವಿತರಿಸಲಿದ್ದಾರೆ.