ಸುಧಾಕರ್ಗೆ ಹೆಂಡತಿ-ಮಕ್ಕಳು ಕೇಳಿರ್ತಾರೆ ಯಾಕೆ ಕೋರ್ಟ್ ಸ್ಟೇ ತಗೊಂಡ್ರಿ ಅಂತಾ: ಶಾಸಕ ಶ್ರೀನಿವಾಸ್ - Minister Sudhakar
🎬 Watch Now: Feature Video
ತುಮಕೂರು: ಕಳ್ಳನ ಮನಸು ಹುಳ್ ಹುಳ್ಗೆ ಅನ್ನೋ ಹಾಗೆ ಯಾರು ಇಂತಹ ಪ್ರಕರಣದಲ್ಲಿ ಭಾಗಿಯಾಗಿದ್ದಾರೋ ಅವರು ಈ ರೀತಿ ಹೇಳಿಕೆ ಕೊಡುತ್ತಾರೆ ಎಂದು ಸಚಿವ ಸುಧಾಕರ್ಗೆ ಗುಬ್ಬಿ ಶಾಸಕ ಶ್ರೀನಿವಾಸ್ ಕುಟುಕಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, 224 ಶಾಸಕರನ್ನು ತನಿಖೆ ಮಾಡೋದಾದ್ರೆ ನನ್ನನ್ನು ಮೊದಲು ತನಿಖೆ ಮಾಡಲಿ. ಸುಧಾಕರ್ ರಾಜೀನಾಮೆ ಕೊಟ್ಟು ತನಿಖೆಗೆ ಒಳಪಡಲಿ. ಇವರದೆಲ್ಲಾ ಏನೋ ಇದೆ. ಹಾಗಾಗಿ ಹೆದರಿಕೊಂಡು ಕೋರ್ಟ್ಗೆ ಹೋಗಿದ್ದಾರೆ. ಇವರ ಹೆಂಡತಿ-ಮಕ್ಕಳು ಕೇಳಿರ್ತಾರೆ ಯಾಕೆ ಸ್ಟೇ ತೆಗೆದುಕೊಂಡ್ರಿ ಎಂದು ವ್ಯಂಗ್ಯವಾಡಿದ್ದಾರೆ.