ನಾನೇನು ಬೀಳಲ್ಲ ಬಿಡ್ರಲೇ ಎನ್ನುತ್ತಲೇ ಕೆಸರಿನಲ್ಲಿ ಜಾರಿ ಬಿದ್ದ ಶಾಸಕ ರೇಣುಕಾಚಾರ್ಯ! - kannada News
🎬 Watch Now: Feature Video
ದಾವಣಗೆರೆ: ನಿನ್ನೆ ತೆಪ್ಪ ಚಲಾಯಿಸಿ ಸುದ್ದಿಯಾಗಿದ್ದ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಇಂದು ಪ್ರವಾಹ ವೀಕ್ಷಣೆ ವೇಳೆ ಜಾರಿ ಬಿದ್ದಿದ್ದಾರೆ. ತುಂಗಾಭದ್ರಾ ನದಿ ನೀರು ಹೆಚ್ಚಾಗಿ ಮನೆಗಳಿಗೆ ನುಗ್ಗಿದ್ದ ಹಿನ್ನೆಲೆ ಜಿಲ್ಲೆಯ ಸಾಸ್ವೇಹಳ್ಳಿ ಗ್ರಾಮಕ್ಕೆ ಪ್ರವಾಹ ವೀಕ್ಷಣೆಗೆ ರೇಣುಕಾಚಾರ್ಯ ಭೇಟಿ ನೀಡಿದ್ದರು. ಈ ವೇಳೆ ಜಾರಿ ಬಿದ್ದಿದ್ದಾರೆ. ಕೆಸರು ಇದೆ ಎಂದು ಕಾರ್ಯಕರ್ತರು ಕೈ ಹಿಡಿದು ನಡೆಸಲು ಮುಂದಾದಾಗ ನಾನೇನು ಬೀಳುವುದಿಲ್ಲ ಎಂದು ಮುಂದೆ ಹೆಜ್ಜೆ ಹಾಕುವಾಗಲೇ ರೇಣುಕಾಚಾರ್ಯ ಕಾಲು ಜಾರಿ ಬಿದ್ದಿದ್ದಾರೆ. ಈ ವೇಳೆ ಕಾರ್ಯಕರ್ತರು ಶಾಸಕರನ್ನು ಮೇಲೆತ್ತಿದ್ದಾರೆ.