ತಿಪಟೂರನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಪರಿಗಣಿಸಬೇಕು: ಶಾಸಕ ನಾಗೇಶ್ - ತಿಪಟೂರನ್ನು ಜಿಲ್ಲೆಗೆ ಅಗ್ರಹ
🎬 Watch Now: Feature Video
ತುಮಕೂರು: ತುಮಕೂರು ಜಿಲ್ಲೆಯನ್ನು ವಿಭಜಿಸುವ ಸಂದರ್ಭದಲ್ಲಿ ತಿಪಟೂರನ್ನು ಜಿಲ್ಲೆಯನ್ನಾಗಿ ಪರಿಗಣಿಸಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿರುವುದಾಗಿ ತಿಪಟೂರು ಶಾಸಕ ನಾಗೇಶ್ ತಿಳಿಸಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಅವರು, ತಿಪಟೂರು ತಾಲೂಕು ಮೂಲಭೂತ ಸೌಕರ್ಯದಲ್ಲಿ ಜಿಲ್ಲೆಯಾಗಿ ರೂಪಾಂತರಗೊಳ್ಳುವ ಅರ್ಹತೆ ಹೊಂದಿದೆ. ಅಂತಾರಾಷ್ಟ್ರೀಯ ಮಟ್ಟದ ಕೊಬ್ಬರಿ ಮಾರುಕಟ್ಟೆ ಸಹ ತಿಪಟೂರಿನಲ್ಲಿದೆ. 1949ರಲ್ಲಿಯೇ ಇಲ್ಲಿ ಎಪಿಎಂಸಿ ಆರಂಭವಾಗಿತ್ತು. ಶೈಕ್ಷಣಿಕ ಕ್ಷೇತ್ರದಲ್ಲಿಯೂ ತಿಪಟೂರು ಮುಂಚೂಣಿಯಲ್ಲಿದೆ ಎಂದರು. ಈ ಎಲ್ಲಾ ದೃಷ್ಟಿಯಿಂದ ತಿಪಟೂರನ್ನು ಜಿಲ್ಲೆಯನ್ನಾಗಿ ಪರಿವರ್ತನೆ ಮಾಡಬಹುದಾಗಿದೆ. ವಿಧಾನಸಭೆಯಲ್ಲಿಯೂ ಸಹ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ಈಗಲೂ ಮತ್ತೊಮ್ಮೆ ತಿಪಟೂರನ್ನು ಕೇಂದ್ರವಾಗಿಸಿಕೊಂಡು ತುರುವೇಕೆರೆ, ಅರಸೀಕೆರೆ, ಚಿಕ್ಕನಾಯಕನಹಳ್ಳಿ ತಾಲೂಕನ್ನು ಸೇರಿಸಿಕೊಂಡು ತಿಪಟೂರು ಜಿಲ್ಲೆಯನ್ನಾಗಿ ಮಾಡಬೇಕೆಂದು ತಿಳಿಸಿದ್ದೇನೆ. ರಾಜ್ಯದಲ್ಲಿ ಬೆಳಗಾವಿಯ ನಂತರ ತುಮಕೂರು ಜಿಲ್ಲೆಯಲ್ಲಿ ಅತಿದೊಡ್ಡ ಜಿಲ್ಲೆಯಾಗಿದೆ. ಇದನ್ನು ಗಮನಿಸಬೇಕಿದೆ ಎಂದು ಅವರು ಹೇಳಿದರು.