ಪೇಮೆಂಟ್ ಕೊಟ್ಟ ಕಡೆ ಹಳ್ಳಿಹಕ್ಕಿ: ಸಾ.ರಾ.ಮಹೇಶ್ ಟೀಕೆ - ಸಾ.ರಾ. ಮಹೇಶ್ ಲೆಟೆಸ್ಟ್ ನ್ಯೂಸ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9692766-thumbnail-3x2-bng.jpg)
ಮೈಸೂರು: ಅಸ್ತಿತ್ವಕ್ಕಾಗಿ ಕುಮಾರಸ್ವಾಮಿ ಬಿಜೆಪಿಗೆ ಹತ್ತಿರವಾಗುತ್ತಿದ್ದಾರೆ ಎಂಬ ಹಳ್ಳಿಹಕ್ಕಿ ಹೇಳಿಕೆಗೆ ಶಾಸಕ ಸಾ.ರಾ.ಮಹೇಶ್ ತಿರುಗೇಟು ನೀಡಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 30 ವರ್ಷ ಕಾಂಗ್ರೆಸ್ ಪಕ್ಷ ನಮ್ಮ ತಂದೆ - ತಾಯಿ ಎಂದು ಹೇಳಿಕೊಂಡು ತಿರುಗುತ್ತಿದ್ದರು. ಆ ಬಳಿಕ ಕಾಂಗ್ರೆಸ್ಗೆ ಡೈವರ್ಸ್ ಕೊಟ್ಟು ಅಲ್ಲಿಂದ ಅವರನ್ನು ನಾವು ಕರೆದುಕೊಂಡು ಬಂದು ಎಮ್ಎಲ್ಸಿ ಮಾಡಿದ್ದೆವು. 30 ವರ್ಷ ಕಾಂಗ್ರೆಸ್ನಲ್ಲಿ, ಒಂದು ವರ್ಷ ಜೆಡಿಎಸ್ನಲ್ಲಿ ಈಗ ಹಳ್ಳಿಹಕ್ಕಿ ಯಾರು? ಪೇಮೆಂಟ್ ಮಾಡುತ್ತಾರೋ ಅಲ್ಲಿ ಇರುತ್ತಾರೆ. ಸಖ ಯಾರು ಎಂಬುದು ನೀವೇ ತೀರ್ಮಾನ ಮಾಡಿ ಎಂದು ವಿಶ್ವನಾಥ್ ವಿರುದ್ಧ ಮಹೇಶ್ ಗುಡುಗಿದರು.