ಸಿಎಎ ಬಗ್ಗೆ ಅರಿವು ಮೂಡಿಸಲು ಬಿಜೆಪಿಯಿಂದ ಮಿಸ್ಡ್ ಕಾಲ್ ಅಭಿಯಾನ! - ಮದ್ದೂರಿನಲ್ಲಿ ಬಿಜೆಪಿ ಸಭೆ
🎬 Watch Now: Feature Video
ಎನ್‌ಡಿಎ ಸರ್ಕಾರ ಜಾರಿಗೆ ತಂದ ಪೌರತ್ವ ಕಾಯ್ದೆ ಪರ ಜನ ಜಾಗೃತಿ ಮೂಡಿಸಲು ಬಿಜೆಪಿ ಮೇಲಿಂದ ಮೇಲೆ ಸಭೆಗಳನ್ನ ಮಾಡ್ತಿದೆ. ಇಂದು ಮದ್ದೂರು ಪಟ್ಟಣದ ಖಾಸಗಿ ಸಮುದಾಯ ಭವನದಲ್ಲಿ ಬಿಜೆಪಿ ಮುಖಂಡರು ಯುವಕರ ಸಭೆ ಮಾಡಿ ಕಾಯ್ದೆ ಪರ ಅರಿವು ಮೂಡಿಸಲು ಮುಂದಾದರು. ಕಾಯ್ದೆ ಬೆಂಬಲಿಸಿ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಬೆಂಬಲ ನೀಡಲು ಮಿಸ್ಡ್ ಕಾಲ್ ಅಭಿಯಾನ ಮಾಡುವ ಜತೆಗೆ ಪೌರತ್ವ ಕಾಯ್ದೆ ಕುರಿತು ಸಭೆಯಲ್ಲಿ ಮಾಹಿತಿ ನೀಡಿದರು. ಸಭೆಯಲ್ಲಿ ಮುಖಂಡರಾದ ಎಸ್ ಪಿ ಸ್ವಾಮಿ ತಾಲೂಕಿನ ಹಲವು ಬಿಜೆಪಿ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು. ಮುಂದೆ ಪೌರತ್ವ ಕಾಯ್ದೆ ಪರ ಜನ ಜಾಗೃತಿ ಮೂಡಿಸಲು ಪತ್ರ ಚಳವಳಿ ಮಾಡಲು ತೀರ್ಮಾನ ಮಾಡಿದರು.