ವರ್ಷ ಕಳೆದರೂ ಕೊಡಗಿನ ಸಂತ್ರಸ್ತರಿಗೆ ಸಿಕ್ಕಿಲ್ಲ ಸೂರು
🎬 Watch Now: Feature Video
ಕೊಡಗು: ಕಳೆದ ಬಾರಿ ಕೊಡಗಿನಲ್ಲಿ ಸುರಿದ ಮಳೆಗೆ ಸಾಕಷ್ಟು ಮಂದಿ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದರು. ಇದನ್ನು ಮನಗಂಡ ಹಿಂದಿನ ರಾಜ್ಯ ಸರ್ಕಾರ ಸೂರಿಲ್ಲದವರಿಗೆ ಜಿಲ್ಲೆಯ ವಿವಿಧೆಡೆ ಸುರಕ್ಷಿತ ಸ್ಥಳಗಳಲ್ಲಿ ನಿವೇಶನಗಳನ್ನು ಕಟ್ಟಿಕೊಡುವ ಭರವಸೆ ನೀಡಿತ್ತು. ಹಾಗೆಯೇ ಕೆಲಸವನ್ನೂ ಶುರು ಮಾಡಿತ್ತು. ಆದ್ರೆ ಅದೇಕೊ ಮನೆಗಳ ಹಸ್ತಾಂತರಕ್ಕೆ ಗ್ರಹಣ ಹಿಡಿದಿದ್ದು, ಮನೆಗಳ ಹಸ್ತಾಂತರಕ್ಕೆ ಇನ್ನೂ ಎಷ್ಟು ದಿನಗಳು ಬೇಕು ಎಂಬ ಗೊಂದಲದಲ್ಲೇ ಸಂತ್ರಸ್ತರು ಇದ್ದಾರೆ.ಈ ನಡುವೆ ವಸತಿ ಸಚಿವ ಸೋಮಣ್ಣ ಇವತ್ತು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.