ನಾಯಕ ಸಮಾಜದ ಮೀಸಲಾತಿ ಬೇಡಿಕೆ ಬಗ್ಗೆ ಸಚಿವ ರಮೇಶ್ ಜಾರಕಿಹೊಳಿ ಮಾತು - ನಾಯಕ ಸಮಾಜದ 7.5 ಎಸ್ಟಿ ಮೀಸಲಾತಿ ಬೇಡಿಕೆ
🎬 Watch Now: Feature Video
ದಾವಣಗೆರೆ: ಶೇ 7.5 ಎಸ್ಟಿ ಮೀಸಲಾತಿಯು ನಾಯಕ ಸಮಾಜದ ಬಹುವರ್ಷಗಳ ಬೇಡಿಕೆಯಾಗಿದ್ದು, ಇಲ್ಲಿ ತನಕ ಸರ್ಕಾರ ಮೀಸಲಾತಿ ನೀಡಿಲ್ಲ. ಆದರೆ ಇಂದು ನಡೆಯಲರುವ ವಾಲ್ಮೀಕಿ ಜಾತ್ರೆಯಲ್ಲಿ ಸಿಎಂ ಯಡಿಯೂರಪ್ಪ ಈ ಮೀಸಲಾತಿ ಬಗ್ಗೆ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ನಾಯಕ ಸಮಾಜ ಕಾದು ಕೂತಿದೆ. 2001ರ ಜನಗಣತಿಯ ಪ್ರಕಾರ ಮೊದಲು 7.5 ಎಸ್ಟಿ ಮೀಸಲಾತಿ ಸಿಗಲಿ. ಬಳಿಕ 2021 ಜನಗಣತಿ ಪ್ರಕಾರ 9.5ರಷ್ಟು ಮೀಸಲಾತಿ ಪಡೆಯಲು ಹೋರಾಟ ಮಾಡುತ್ತೇವೆ ಎಂದು ಶ್ರೀ ಪ್ರಸನ್ನಾನಂದ ಶ್ರೀಯವರು ಹೇಳಿಕೆ ನೀಡಿದ್ದರು. ಇನ್ನು ಮೀಸಲಾತಿ ಹೆಚ್ಚಿಸುವ ಪ್ರಕ್ರಿಯೆಗೆ ನಾಗಮೋಹನ್ ದಾಸ್ ವರದಿ ಕೂಡ ಸಿದ್ಧವಾಗಿದ್ದು, ಅದನ್ನು ಸಮಿತಿ ಮುಂದೆ ಮಂಡಿಸಬೇಕಾಗಿದೆ. ಈ ಬಗ್ಗೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಯರು ಮಾತನಾಡಿದ್ದಾರೆ.