ಗೋಮಾತೆ ರಕ್ಷಣೆಯೇ ನನ್ನ ಸಂಕಲ್ಪ, ಪಶುಸಂಗೋಪನ ಇಲಾಖೆಯೇ ಸೂಕ್ತ: ಈಟಿವಿ ಭಾರತ ಜೊತೆ ಸಚಿವ ಚವ್ಹಾಣ್ ಮಾತು - ಗೋಮಾತೆ ಹೆಸರಲ್ಲಿ ಪ್ರಮಾಣವಚನ
🎬 Watch Now: Feature Video
2ನೇ ಬಾರಿ ಮಂತ್ರಿಯಾಗಿ ಔರಾದ್ ಶಾಸಕ ಪ್ರಭು ಚವ್ಹಾಣ ಗೋಮಾತೆ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಬಳಿಕ ಈಟಿವಿ ಭಾರತ ಜೊತೆ ಅವರು ಮಾತನಾಡಿದ್ದು ನಮ್ಮ ಸಂಕಲ್ಪ ಗೋಮಾತೆ ರಕ್ಷಣೆಯಾಗಬೇಕು ಎಂಬುದು ಎಂದು ಹೇಳಿದ್ರು. ಅದಕ್ಕಾಗಿ ಕರ್ನಾಟಕದಲ್ಲಿ ನಾನು ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದ್ದೇನೆ. ದೇಶದ ಇತಿಹಾಸದಲ್ಲಿ ಪ್ರಾಣಿ ಸಹಾಯವಾಣಿ ಕೇಂದ್ರ ಅರ್ಥಾತ್ ವಾರ್ ರೂಮ್ ಆರಂಭಿಸಿದ್ದೇನೆ. ಇವೆಲ್ಲ ಕಾರ್ಯಗಳು ಸಂಪೂರ್ಣವಾಗಬೇಕು. ಹೀಗಾಗಿ ಮತ್ತೆ ಪಶುಸಂಗೋಪನಾ ಸಚಿವನಾಗೇ ಮುಂದುವರಿಯಬೇಕೆಂದು ತಮ್ಮ ಇಂಗಿತ ವ್ಯಕ್ತಪಡಿಸಿದ್ರು. ಇದೇ ವೇಳೆ ಬೇರೆ ಖಾತೆ ಕೊಟ್ಟರೂ ನಿಭಾಯಿಸುವೆ ಆದರೆ, ನಾನು ಗೋಮಾತಾ ಸೇವಕ. ಹೀಗಾಗಿ ಈ ಖಾತೆಯೇ ಸೂಕ್ತ ಎಂದರು.ಇನ್ನು ತಮ್ಮ ವಿಶೇಷವಾದ ಧಿರಿಸಿನ ಬಗ್ಗೆ ಪ್ರತಿಕ್ರಿಯಿಸಿ, ಇದು ನಮ್ಮ ಸಂಸ್ಕೃತಿಯ ಸಂಕೇತ, ನಮ್ಮ ಧರ್ಮಗುರು ಸೇವಾಲಾಲ್ ಮಾಹಾರಾಜರ ಫೋಷಾಕು. ಅದಕ್ಕಾಗಿ ನಾನು 2ನೇ ಬಾರಿ ಇದೇ ಉಡುಗೆ ತೊಟ್ಟಿದ್ದೇನೆ ಖುಷಿ ಇದೆ ಎಂದರು. ಇನ್ನು 3 ಬಾರಿ ನನ್ನನ್ನು ಗೆಲ್ಲಿಸಿದ ಬೀದರ್ ವಿಶೇಷವಾಗಿ ಔರಾದ್ ಜನತೆಗೆ ನಾನು ಋಣಿ, ಅವರಿಗೆಲ್ಲರಿಗಾಗಿ ಕೆಲಸ ಮಾಡುತ್ತೇನೆ ಎಂದು ಈಟಿವಿ ಭಾರತಕ್ಕೆ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ರು.