ಕೊರೊನಾ ಲಿಕ್ಕರ್ನಿಂದ ಸ್ವಲ್ಪ ವಾಸಿ ಆಗುತ್ತಂತೆ, ನಾನೇನೂ ಕುಡಿಯಲ್ಲ: ಈಶ್ವರಪ್ಪ ನಗೆಚಟಾಕಿ - ಭಾರತದಲ್ಲಿ ಕೊರೊನಾ ವೈರಸ್
🎬 Watch Now: Feature Video
ಕೊರೊನಾ ಲಿಕ್ಕರ್ನಿಂದ ಸ್ವಲ್ಪ ವಾಸಿನೂ ಆಗುತ್ತಂತೆ. ಹೌದಾ...? ಡಾಕ್ಟರೇ ಹೇಳ್ಬೇಕು. ಹೇಳಿ.. ಹೇಳಿ... ನಾನಂತೂ ಕುಡಿಯಲ್ಲ ಎಂದು ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ನಗೆ ಚಟಾಕಿ ಹಾರಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೊರೊನೊ ಕುರಿತು ತೆಗೆದುಕೊಂಡಿರುವ ಮುನ್ನಚ್ಚರಿಕಾ ಕ್ರಮ ಹಾಗೂ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ಕರೆಯಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು, ಕೊರೊನೊ ವೈರಸ್ ಸೋಂಕು ಲಿಕ್ಕರ್ನಿಂದ ಕಡಿಮೆಯಾಗುತ್ತದೆ ಎಂದು ಪತ್ರಿಕೆಯಲ್ಲಿ ಓದಿದೆ. ಇದು ನಿಜವಾ? ಡಾಕ್ಟರೇ ಹೇಳಬೇಕು ಎಂದಾಗ ವೈದ್ಯರು ಅಲ್ಕೋಹಾಲ್ ಅಂಶವಿದ್ದರೆ ಶೇ 40 ರಷ್ಟು ಸೋಂಕು ಕಡಿಮೆಯಾಗುತ್ತೆ ಎಂದರು.