ರಾಜೇಂದ್ರ ಕೀರ್ತಿ ಧನ್ವಂತರಿ ಉದ್ಯಾನವನ ಹಸಿರೀಕರಣಕ್ಕೆ ಈಶ್ವರಪ್ಪ ಚಾಲನೆ - ಜ್ಞಾನವಿಹಾರ ಬಡಾವಣೆಯ ಶ್ರೀ ಕೋದಂಡರಾಮ ದೇವಾಲಯ
🎬 Watch Now: Feature Video
ಶಿವಮೊಗ್ಗ: ಸ್ಮಾರ್ಟ್ ಸಿಟಿ ವತಿಯಿಂದ ಕೀರ್ತಿ ನಗರದ ರಾಜೇಂದ್ರ ಕೀರ್ತಿ ಧನ್ವಂತರಿ ಉದ್ಯಾನವನ್ನು ಹಸಿರೀಕರಣ ಗೊಳಿಸುವ ಯೋಜನೆಗೆ ಸಚಿವ ಕೆ.ಎಸ್ ಈಶ್ವರಪ್ಪ ಚಾಲನೆ ನೀಡಿದರು. ನಂತರ ನಗರದ ಕೋಟೆ ರಸ್ತೆಯಲ್ಲಿರುವ ಗಾಯತ್ರಿ ದೇವಾಲಯದ ಆವರಣದಲ್ಲಿ 50 ಲಕ್ಷ ರೂ ವೆಚ್ಚದಲ್ಲಿ ವೈದಿಕ ಭವನ ನಿರ್ಮಾಣದ ಕಾಮಗಾರಿಗೆ ಶಂಕುಸ್ಥಾಪನೆ ನೇರವೇರಿಸಿ ದೇವರ ದರ್ಶನ ಪಡೆದರು. ಇದರ ಜೊತೆಗೆ ನಗರದ ನಿಸರ್ಗ ಬಡಾವಣೆಯ ವೀರಾಂಜನೇಯ ದೇವಾಲಯ ಮತ್ತು ಜ್ಞಾನವಿಹಾರ ಬಡಾವಣೆಯ ಕೋದಂಡರಾಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.