ರಾತ್ರಿ 12.45ರ ಸುಮಾರಿಗೆ ನೆಟ್ವರ್ಕ್ ಮೂಲಕ ಪೊಲೀಸರು ಪತ್ತೆ ಹಚ್ಚಿದ್ರು : ಸಿ ಟಿ ರವಿ - ಎಂಎಲ್ಸಿ ಧರ್ಮೇಗೌಡ ಆತ್ಮಹತ್ಯೆ ಪ್ರತಿಕ್ರಿಯೆಗಳು
🎬 Watch Now: Feature Video
ಚಿಕ್ಕಮಗಳೂರು : ವಿಧಾನಪರಿಷತ್ ಉಪಸಭಾಪತಿ ಎಸ್ ಎಲ್ ಧರ್ಮೇಗೌಡ(65) ಅವರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತಂತೆ ಪ್ರತಿಕ್ರಿಸಿದ ಮಾಜಿ ಸಚಿವ ಸಿ ಟಿ ರವಿ ಅವರು, ಧರ್ಮೇಗೌಡರು ಖಾಸಗಿ ಕಾರಿನಲ್ಲಿ ಬಂದಿದ್ದರು. ಸುಮಾರು ನಾಲ್ಕು ಗಂಟೆಯಿಂದ ಇಲ್ಲೇ ಸುತ್ತಾಡಿದ್ದಾರೆ. ಆಮೇಲೆ ಅಂದ್ರೆ ಸಂಜೆ 6 ಗಂಟೆಗೆ ಆಗಮಿಸಿದ ರೈಲಿಗೆ ತಲೆ ಕೊಟ್ಟಿದ್ದಾರೆ. ಧರ್ಮೇಗೌಡ ಕುಟುಂಬಸ್ಥರಿಗೆ ರಾತ್ರಿ 12.45ರ ಸುಮಾರಿಗೆ ಪೊಲೀಸರು ನೆಟ್ವರ್ಕ್ ಮೂಲಕ ಪತ್ತೆ ಹಚ್ಚಿದಾಗ ಆತ್ಮಹತ್ಯೆ ವಿಷಯ ಗೊತ್ತಾಗಿದೆ. ವಿಧಾನಪರಿಷತ್ನಲ್ಲಿ ಗಲಾಟೆಯಾದ ಸಂದರ್ಭದಲ್ಲಿ ನಾನು ತಮಿಳುನಾಡಿನಲ್ಲಿದ್ದೆ. ಬಳಿಕ ಆ ಘಟನೆ ಬಗ್ಗೆ ಧರ್ಮೇಗೌಡರ ಬಳಿ ಮಾತನಾಡಿದಾಗ ಅವರು ಯಾವುದೇ ರೀತಿಯ ಬೇಸರ ವ್ಯಕ್ತಪಡಿಸಲಿಲ್ಲ. ಆದ್ರೆ, ಈ ವಿಷಯ ಯಾಕೆ ಅಷ್ಟು ಮನಸ್ಸಿಗೆ ಹಚ್ಕೊಂಡ್ರೋ ಎಂಬುದು ಗೊತ್ತಾಗಿಲ್ಲ. ನಿರೀಕ್ಷೆ ಮಾಡದಂತಹ ಘಟನೆ ಆಗಿದೆ ಎಂದು ಸಿಟಿ ರವಿ ಹೇಳಿದರು.
Last Updated : Dec 29, 2020, 5:28 PM IST