ಎಂಇಎಸ್ ಹುತಾತ್ಮ ದಿನದಲ್ಲಿ ಪಾಲ್ಗೊಳ್ಳಲು ಬಂದ 'ಮಹಾ'ಮಂತ್ರಿ; ಪೊಲೀಸರು ತಡೆದಿದ್ದಕ್ಕೆ ಆಕ್ರೋಶ - ಉದ್ಧಟತನ ತೋರಲು ಎಂಇಎಸ್ ಪ್ಲಾನ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10274128-thumbnail-3x2-belagavi.jpg)
ಎಂಇಎಸ್ ಕಾರ್ಯಕರ್ತರ ಹುತಾತ್ಮ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಬೆಳಗಾವಿಗೆ ಆಗಮಿಸುತ್ತಿದ್ದ ಮಹಾರಾಷ್ಟ್ರ ಸಚಿವ ರಾಜೇಂದ್ರ ಯಡ್ರಾಂಕರ್ ಅವರನ್ನು ಕರ್ನಾಟಕದ ನಿಪ್ಪಾಣಿ ತಾಲೂಕಿನ ಕೊಗನೊಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿರುವ ಟೋಲ್‌ನಲ್ಲಿ ಬೆಳಗಾವಿ ಪೊಲೀಸರು ತಡೆದಿದ್ದಾರೆ. ಈ ವೇಳೆ ಸಚಿವರನ್ನು ತಡೆದಿದ್ದಕ್ಕೆ ಪೊಲೀಸರ ವಿರುದ್ಧ ಎಂಇಎಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. 'ಬೆಳಗಾವಿ ಯಾರಪ್ಪಂದಲ್ಲ, ಬೆಳಗಾವಿ ನಮ್ಮದು..' ಎಂದು ಉದ್ಧಟನತದ ಘೋಷಣೆಗಳನ್ನು ಕೂಗಿದರು.
Last Updated : Jan 17, 2021, 6:12 PM IST