ಸೊರಬ: ರೋಟರಿ ಸಂಸ್ಥೆಯಿಂದ ಮಾಸ್ಕ್ ವಿತರಿಸಿ ಕೊರೊನಾ ಜಾಗೃತಿ.. - Mask Distribution by Rotary Institution in sorabha
🎬 Watch Now: Feature Video
ಸೊರಬ ಪಟ್ಟಣದಲ್ಲಿ ಉಚಿತ ಮಾಸ್ಕ್ ವಿತರಿಸುವ ಮೂಲಕ ರೋಟರಿ ಸಂಸ್ಥೆಯವರು ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸಿದ್ದಾರೆ. ಈ ವೇಳೆ ಮಾತನಾಡಿದ ರೋಟರಿ ಅಧ್ಯಕ್ಷ ಗಿರೀಶ್, ಕೊರೊನಾ ಬಗ್ಗೆ ಜನರಲ್ಲಿ ಪ್ರಾರಂಭದಲ್ಲಿದ್ದ ಭಯ ಈಗ ಇಲ್ಲದಂತಾಗಿದೆ. ಸಾರ್ವಜನಿಕರು ಕೊರೊನಾ ವೈರಸ್ ಕುರಿತು ಅರಿವು ಹೆಚ್ಚಿಸಿಕೊಳ್ಳಬೇಕು ಹಾಗೆಯೇ ಜಾಗೃತಿಯಿಂದರಬೇಕು ಎಂದಿದ್ದಾರೆ. ಈ ವೇಳೆ ರೋಟರಿಯ ಪ್ರಶಾಂತ್, ರಾಜು ಹಿರಿಯಾವಲಿ, ನಾಗರಾಜ್ ಗುತ್ತಿ, ಕೃಷ್ಣಪ್ಪ ಸೇರಿದಂತೆ ಇತರರು ಹಾಜರಿದ್ದರು.