ಗದಗ: ಕೊರೊನಾ ನಿರ್ಮೂಲನೆಯಾಗಲಿ ಮಂತ್ರ ಪಠಣ ಮಾಡಿದ ಮಹಿಳೆಯರು - Mundaragi of Gadag
🎬 Watch Now: Feature Video
ದೇಶದೆಲ್ಲೆಡೆ ಕೊರೊನಾ ಭೀತಿ ಆವರಿಸಿದ್ದು, ಸರ್ಕಾರ ವಿವಿಧ ಮುಂಜಾಗ್ರತಾ ಕ್ರಮಗಳನ್ನು, ನಿವಾರಣೆಗೆ ಪರಿಹಾರ ಹುಡುಕುವುದರಲ್ಲಿ ನಿರತವಾಗಿದೆ. ಇತ್ತ ಹಲವಡೆ ಕೊರೊನಾ ನಿರ್ಮೂಲನೆಯಾಗಲಿ ಪೂಜೆ ಪುನಸ್ಕಾರಗಳು ನಡೆಯುತ್ತಿವೆ. ಅದೇ ರೀತಿ ಗದಗ ಜಿಲ್ಲೆ ಮುಂಡರಗಿ ಪಟ್ಟಣದ ಅನ್ನದಾನೀಶ್ವರ ಸಂಸ್ಥಾನ ಮಠದಲ್ಲಿರುವ ಶಿವನ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಗುತ್ತಿದೆ. ಮಠದ ಅನ್ನದಾನೀಶ್ವರ ಅಕ್ಕನ ಬಳಗದ ಸದಸ್ಯೆಯರಿಂದ ಬೆಳಗ್ಗೆಯಿಂದ ಶಿವನ ಮೂರ್ತಿಗೆ ರುದ್ರಾಭಿಷೇಕ ಪಠಣ, ಶಿವ ನಾಮಾವಳಿ ಮಹಾಮಂಗಳಾರತಿ ಪೂಜೆ ನೆರವೇರಿಸಿದ್ದಾರೆ. ವೈದ್ಯ ಲೋಕಕ್ಕೂ ಸವಾಲಾಗಿರುವ ಹಾಗೂ ಜನರ ನೆಮ್ಮದಿಯನ್ನು ಕಸಿದುಕೊಂಡಿರುವ ಕೊರೊನಾ ಸರ್ವನಾಶವಾಗಲಿ ಎನ್ನುವ ಸಂಕಲ್ಪದೊಂದಿಗೆ ಈ ಪೂಜೆ ಹಮ್ಮಿಕೊಂಡಿದ್ದು, ದೇವರ ಮೊರೆ ಹೋಗಿದ್ದಾರೆ.