ಮೈಸೂರಿನಲ್ಲಿ ಕಡ್ಡಾಯ ಮತದಾನ ಜಾಗೃತಿ ಜಾಥಾ.. - latest mysuru votiing awareness jatha news
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5153315-thumbnail-3x2-mysuru.jpg)
ಮೈಸೂರಿನ ಹುಣಸೂರು ತಾಲೂಕಿನಲ್ಲಿ ಡಿ.5ರಂದು ನಡೆಯಲಿರುವ ಮತದಾನಕ್ಕೆ ಪ್ರತಿಯೊಬ್ಬ ಮತದಾರರನ್ನು ತಪ್ಪದೇ ಮತದಾನ ಮಾಡಲು ಜಾಗೃತಿ ಮೂಡಿಸಲಾಯಿತು. ಹುಣಸೂರು ಪಟ್ಟಣದ ದಿ.ದೇವರಾಜ ಅರಸು ಅವರ ಪುತ್ಥಳಿ ಮುಂದೆ ಜಿಲ್ಲಾ ಮತ್ತು ತಾಲೂಕು ಸ್ವೀಪ್ ಸಮಿತಿ ವತಿಯಿಂದ ಏರ್ಪಡಿಸಿದ್ದ ಕಡ್ಡಾಯ ಮತದಾನ ರಥ ಜಾಗೃತಿಗೆ ಹುಣಸೂರು ತಾಲೂಕು ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಗಿರೀಶ್ ಅವರು ಚಾಲನೆ ನೀಡಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂದಿನಿಂದ ಡಿ.5ರವರೆಗೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಡ್ಡಾಯ ಮತದಾನ ಮಾಡುವಂತೆ ಜಾಗೃತಿ ಮೂಡಿಸಲಾಗುವುದು. ಇಂದು 20 ಹಳ್ಳಿಗಳಲ್ಲಿ ಮತದಾನ ರಥ ಸಂಚಾರ ಮಾಡಲಿದೆ ಎಂದರು. ಪಟ್ಟಣದಿಂದ ಆರಂಭಗೊಂಡ ರಥಯಾತ್ರೆಯಲ್ಲಿ 'ತಪ್ಪದೇ ಮತದಾನ ಮಾಡಿ', 'ನಮ್ಮ ಮತ ನಮ್ಮ ಶಕ್ತಿ', 'ನಮ್ಮ ಮತ ದೇಶಕ್ಕೆ ಹಿತ' ಹೀಗೆ ಹಲವು ಜಾಗೃತಿಯುಳ್ಳ ಫಲಕಗಳನ್ನು ಹಿಡಿದು ಜಾಥಾ ನಡೆಸಲಾಯಿತು..