ಮಾಸ್ಕ್ ಹಾಕು ಎಂದಿದ್ದಕ್ಕೆ ತಹಶೀಲ್ದಾರ್ ಮೇಲೆ ರೇಗಾಡಿದ ವ್ಯಕ್ತಿ.. ದಾವಣಗೆರೆಯಲ್ಲಿ ವ್ಯಕ್ತಿಗೆ ಖಾಕಿ ಕ್ಲಾಸ್ - Tahsildar Girish
🎬 Watch Now: Feature Video
ದಾವಣಗೆರೆ: ಮಾಸ್ಕ್ ಹಾಕು ಎಂದಿದ್ದಕ್ಕೆ ತಹಶೀಲ್ದಾರ್ ಮೇಲೆ ವ್ಯಕ್ತಿವೋರ್ವ ರೇಗಾಡಿರುವ ಘಟನೆ ನಗರದ ಕಾಳಿಕಾದೇವಿ ರಸ್ತೆಯಲ್ಲಿ ನಡೆದಿದೆ. ಮಾಸ್ಕ್ ಹಾಕದೇ ರಸ್ತೆಯಲ್ಲಿ ತೆರಳುತ್ತಿದ್ದ ವ್ಯಕ್ತಿಯನ್ನು ತಹಶೀಲ್ದಾರ್ ಗಿರೀಶ್ ಮಾಸ್ಕ್ ಎಲ್ಲಿ ಎಂದು ಕೇಳಿ ಬುದ್ಧಿ ಹೇಳಿದ್ದಾರೆ. ಇದರಿಂದ ರೊಚ್ಚಿಗೆದ್ದ ವ್ಯಕ್ತಿಯು ತಹಶೀಲ್ದಾರ್ ಹಾಗೂ ಪೊಲೀಸರ ಮೇಲೆಯೇ ಎಗರಾಡಿದ್ದಾನೆ. ಸದ್ಯ ಗಾಂಧಿ ನಗರ ಪೊಲೀಸರು ಉದ್ಧಟತನ ತೋರಿದ ಆ ವ್ಯಕ್ತಿಗೆ ಕಪಾಳಮೋಕ್ಷ ಮಾಡಿ ವಶಕ್ಕೆ ಪಡೆದಿದ್ದಾರೆ.