ಮಲ್ಲಿಕಾರ್ಜುನ ಮನ್ಸೂರ್ ಪುಣ್ಯಸ್ಮರಣೆ: ಸಮಾಧಿಗೆ ಜಿಲ್ಲಾಧಿಕಾರಿ ಪೂಜೆ - 27ನೇ ಪುಣ್ಯಸ್ಮರಣೆ
🎬 Watch Now: Feature Video
ಧಾರವಾಡ:ಹಿಂದೂಸ್ತಾನಿ ಸಂಗೀತ ರತ್ನ ದಿ. ಡಾ. ಮಲ್ಲಿಕಾರ್ಜುನ ಮನ್ಸೂರ್ ಅವರ 27ನೇ ಪುಣ್ಯಸ್ಮರಣೆ ನಿಮಿತ್ತ, ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಮನ್ಸೂರ್ ಅವರ ಸಮಾಧಿಗೆ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿ, ಡಾ. ಮಲ್ಲಿಕಾರ್ಜುನ ಮನ್ಸೂರ್ ಅವರ ಪುಣ್ಯಸ್ಮರಣೆ ನಿಮಿತ್ತ, ಪ್ರತಿ ವರ್ಷ ಆಯೋಜಿಸಲಾಗುತ್ತಿದ್ದ ಸಂಗೀತೋತ್ಸವವನ್ನು ಜಿಲ್ಲೆಯ ನೆರೆ ಹಾವಳಿಯಿಂದಾಗಿ ಮುಂದೂಡಲಾಗಿದೆ. ಟ್ರಸ್ಟ್ ಸದಸ್ಯರ ಆಶಯದಂತೆ ಸಂಗೀತೋತ್ಸವವನ್ನು ಮುಂದಿನ ವರ್ಷ ಮತ್ತೆ ಮುಂದುವರಿಸಲಾಗುವುದು ಎಂದು ತಿಳಿಸಿದರು.