ಗಣಿನಗರಿಯೊಳಗೆ ಸಂಕ್ರಾಂತಿ ಸಂಭ್ರಮ.. ವರ್ಷಾರಂಭಕ್ಕೆ ಈ ಸಂಕ್ರಮಣ ಮುನ್ನುಡಿ! - Makar Sankranti celebration,
🎬 Watch Now: Feature Video

ಗಣಿನಗರಿ ಬಳ್ಳಾರಿಯಲ್ಲಿಂದು ಸಂಕ್ರಾಂತಿ ಹಬ್ಬದ ಸಂಭ್ರಮ ಎಲ್ಲೆ ಮೀರಿತ್ತು. ಆಯಾ ವಾರ್ಡುಗಳಲ್ಲಿನ ಮನೆ ಮುಂದೆ ವರ್ಣರಂಜಿತ ರಂಗೋಲಿಯ ಚಿತ್ತಾರದ ಕಲರವ ಜೋರಾಗಿತ್ತು. ಸತ್ಯನಾರಾಯಣ ಪೇಟೆ ಎಂಎಂಟಿಸಿ ಪಾರ್ಕ್ ಬಳಿ ಸಣ್ಣದೊಂದು ಗ್ರಾಮವೇ ಸೃಷ್ಠಿ ಮಾಡಿದಂತಿತ್ತು. ಚಪ್ಪರ,ಪುರಾತನ ಕಾಲದ ಬಾವಿ,ಹೊಲ,ಗದ್ದೆ ಹಾಗೂ ಜೋಡೆತ್ತು, ಕುದುರೆ,ಠಗರು, ಚಕ್ಕಡಿ ಬಂಡಿ ಮತ್ತು ಮಣ್ಣಿನ ಮಡಿಕೆ, ಕಬ್ಬಿನ ದಂಟು ಸೇರಿ ಇತರೆ ಪರಿಕರಿಗಳು ಗಮನ ಸೆಳೆದವು. ಮಣ್ಣಿನ ಮಡಿಕೆಯಲ್ಲಿ ಹಾಲನ್ನು ಉಕ್ಕಿಸೋ ಮುಖೇನ ಸಂಕ್ರಾಂತಿ ಹಬ್ಬದ ನಿಮಿತ್ತ ರಂಗೋಲಿ ಸ್ಪರ್ಧೆಗೆ ಚಾಲನೆ ದೊರೆಯಿತು. ಕಮ್ಮರಚೇಡು ಮಠದ ಕಲ್ಯಾಣ ಸ್ವಾಮೀಜಿಯವರು ರಂಗೋಲಿ ಸ್ಪರ್ಧೆಗೆ ಚಾಲನೆ ನೀಡಿದ್ರು.