ಮಳೆ ತಂದ ಅವಾಂತರ: ಸಂಕಷ್ಟದಲ್ಲಿ ರೆಸಾರ್ಟ್ ಮತ್ತು ಹೋಂ ಸ್ಟೇ ಮಾಲೀಕರು..! - ಮಹಾಮಳೆ
🎬 Watch Now: Feature Video
ಮಂಜಿನ ನಗರಿ ಮಡಿಕೇರಿಯಲ್ಲಿ 10 ವರ್ಷಗಳ ಹಿಂದೆ ಪ್ರವಾಸೋದ್ಯಮ ಕ್ಷೇತ್ರ ಶರ ವೇಗದಲ್ಲಿ ಬೆಳೆಯಿತು. ದಕ್ಷಿಣ ಭಾರತದ ಸ್ಕಾಟ್‌ಲ್ಯಾಂಡ್ ಎಂದೇ ಪ್ರಸಿದ್ದಿ ಪಡೆದ ಕೊಡಗಿಗೆ ನಿತ್ಯ ಸಾವಿರಾರು, ಹಾಗೆಯೇ ವಾರಾಂತ್ಯದಲ್ಲಿ ಲಕ್ಷಕ್ಕೂ ಮೀರಿದಂತೆ ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡಿದ ದಾಖಲೆಗಳೂ ಉಂಟು. ಆದರೆ, ಕಳೆದೆರಡು ವರ್ಷಗಳಿಂದ ಜಿಲ್ಲೆಯಲ್ಲಿ ಸುರಿದ ಮಹಾಮಳೆ ಪ್ರವಾಸೋದ್ಯಮಕ್ಕೆ ದೊಡ್ಡ ಪೆಟ್ಟು ಕೊಟ್ಟಿದೆ..!