ಸಾರಿಗೆ ಬಂದ್: ಬಸ್ ನಿಲ್ದಾಣದಲ್ಲಿನ ಮಳಿಗೆ ವ್ಯಾಪಾರಿಗಳಿಗೆ ತಟ್ಟಿದ ಪ್ರತಿಭಟನೆ ಬಿಸಿ - Loss to the shop owner at the bus stop due to strike
🎬 Watch Now: Feature Video
ಹಾವೇರಿ: ಸಾರಿಗೆ ಇಲಾಖೆ ನೌಕರರ ಮುಷ್ಕರ ನಾಲ್ಕು ದಿನ ಪೂರೈಸಿ, ಐದನೇ ದಿನಕ್ಕೆ ಕಾಲಿಟ್ಟಿದ್ದು, ಪ್ರತಿಭಟನೆ ಕಾವು ಏರಲಾರಂಭಿಸಿದೆ. ಬಂದ್ ಬಿಸಿ ಇದೀಗ ಹಾವೇರಿ ಜಿಲ್ಲಾ ಕೇಂದ್ರ ಬಸ್ ನಿಲ್ದಾಣದಲ್ಲಿನ ಮಳಿಗೆ ವ್ಯಾಪಾರಿಗಳಿಗೆ ತಟ್ಟಲಾರಂಭಿಸಿದೆ. ಕಳೆದ ನಾಲ್ಕೈದು ದಿನಗಳಿಂದ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆ ವ್ಯಾಪಾರ ಇಲ್ಲದಂತಾಗಿದೆ ಎಂದು ವರ್ತಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.