ರಾಯಚೂರಿನಲ್ಲಿ ಲಾಕ್ಡೌನ್ಗೆ ಮಿಶ್ರ ಪ್ರತಿಕ್ರಿಯೆ: ಎಂದಿನಂತೆ ಜನರ ಓಡಾಟ.. ಆತಂಕ - Lock down not effective in rayachur
🎬 Watch Now: Feature Video
ರಾಯಚೂರು: ಜಿಲ್ಲೆಯಲ್ಲಿ ಲಾಕ್ಡೌನ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದಲ್ಲಿ ವಾಹನಗಳ ಸಂಚಾರ ಕಡಿಮೆಯಾಗಿರುವುದು ಹೊರತು ಪಡಿಸಿ, ಜನರ ಓಡಾಟ ಎಂದಿನಂತೆ ಇದೆ. ದಿನ ಬಳಕೆ ವಸ್ತುಗಳ ಖರೀದಿಗೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿಕೊಟ್ಟಿರುವುದನ್ನು ನೆಪವಾಗಿಸಿಕೊಂಡು ಅನಾವಶ್ಯಕವಾಗಿ ಓಡಾಟ ನಡೆಸುತ್ತಿದ್ದಾರೆ. ಇದಲ್ಲದೇ ಜನಧನ್ ಗರೀಬ್ ಕಲ್ಯಾಣ ಯೋಜನೆ ಹಣ ಪಡೆಯಲು ಜನರು ಬ್ಯಾಂಕ್‌ಗಳಿಗೆ ಮುಗಿಬಿದ್ದಿದ್ದಾರೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆಯ ಶ್ರಮದಿಂದ ಇನ್ನೂ ಯಾವುದೇ ಪಾಸಿಟಿವ್ ಪ್ರಕರಣ ದಾಖಲಾಗಿಲ್ಲ.