ಲಾಕ್​ಡೌನ್‌ ಎಫೆಕ್ಟ್​.. ಅಂಗಡಿಯಲ್ಲೇ ಉಳಿದ ಆರ್ಡರ್​ ಕೊಟ್ಟಿದ್ದ ಏಲಕ್ಕಿ ಮಾಲೆಗಳು.. - ಕೊರೊನಾ

🎬 Watch Now: Feature Video

thumbnail

By

Published : May 8, 2020, 10:51 AM IST

ಹಾವೇರಿ ಅಂದಾಕ್ಷಣ ಸಾಕು ಕಣ್ಮುಂದೆ ಬರೋದು ಏಲಕ್ಕಿ ಮಾಲೆ. ಈ ಮಾಲೆ ತಯಾರಿಕೆ ಮೇಲೆ ಇದೀಗ ಕೊರೊನಾ ಕರಿನೆರಳು ಬಿದ್ದಿದೆ. ಕೊರೊನಾ ವೈರಸ್ ಕಾರಣದಿಂದ ಮದುವೆಗಳು ಸೇರಿದಂತೆ ಸಾರ್ವಜನಿಕ ಸಮಾರಂಭಗಳು ಮುಂದೂಡಲ್ಪಟ್ಟಿವೆ. ಪರಿಣಾಮ ಏಲಕ್ಕಿ ಮಾಲೆಯನ್ನ ಕೇಳುವವರೇ ಇಲ್ಲದಂತಾಗಿದೆ. ನೂರು ವರ್ಷಗಳ ಇತಿಹಾಸದಲ್ಲಿ ಪ್ರಥಮ ಬಾರಿಗೆ ಏಲಕ್ಕಿ ಮಾಲೆ ಈ ಸಂಕಷ್ಟ ಎದುರಿಸುತ್ತಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಮಾಲೆಗಳು ತಯಾರಕರಲ್ಲಿಯೇ ಉಳಿದಿವೆ. ದೇಶ-ವಿದೇಶಗಳಲ್ಲಿ ಏಲಕ್ಕಿ ಕಂಪು ಹರಡಬೇಕಾಗಿದ್ದ ಮಾಲೆಗಳಿಗೆ ಕೊರೊನಾ ಗೃಹಬಂಧನದಲ್ಲಿರುವಂತೆ ಮಾಡಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.