ETV Bharat / state

ಬೆಂಗಳೂರು: ಮೊಬೈಲ್ ಕದ್ದೊಯ್ಯುತ್ತಿದ್ದವರ ಬೈಕ್​ನ್ನ ಕಾರಿನಲ್ಲಿ ಬೆನ್ನಟ್ಟಿ ಹಿಡಿದ ಮಾಜಿ ಕಾರ್ಪೊರೇಟರ್ - ವಿಡಿಯೋ - MOBILE SNATCHING

ಯುವಕನ ಮೊಬೈಲ್​ ಕಸಿದು ಪರಾರಿಯಾಗುತ್ತಿದ್ದ ಇಬ್ಬರು ಖದೀಮರನ್ನು ಮಾಜಿ ಕಾರ್ಪೊರೇಟರ್ ಕಾರಿನಲ್ಲಿ ಬೆನ್ನಟ್ಟಿ ಮೊಬೈಲ್ ಹಿಂಪಡೆಯುವಲ್ಲಿ ಸಫಲರಾಗಿದ್ದಾರೆ.

ಮೊಬೈಲ್​​ ಕದ್ದು ಎಸ್ಕೇಪ್​ ಆಗುತ್ತಿದ್ದವರನ್ನು ಚೇಸ್ ಮಾಡಿದ ಮಾಜಿ ಕಾರ್ಪೊರೇಟರ್
ಮೊಬೈಲ್​​ ಕದ್ದು ಎಸ್ಕೇಪ್​ ಆಗುತ್ತಿದ್ದವರನ್ನು ಚೇಸ್ ಮಾಡಿದ ಮಾಜಿ ಕಾರ್ಪೊರೇಟರ್ (ETV Bharat)
author img

By ETV Bharat Karnataka Team

Published : Dec 15, 2024, 10:49 PM IST

ಬೆಂಗಳೂರು: ದ್ವಿಚಕ್ರ ವಾಹನದಲ್ಲಿ ಬಂದು ಯುವಕನ ಮೊಬೈಲ್​ ಕಸಿದು ಪರಾರಿಯಾಗುತ್ತಿದ್ದ ಇಬ್ಬರು ಖದೀಮರನ್ನು ಮಾಜಿ ಕಾರ್ಪೊರೇಟರ್ ಕಾರಿನಲ್ಲಿ ಬೆನ್ನಟ್ಟಿ ಮೊಬೈಲ್ ಹಿಂಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಭಾನುವಾರ ಬೆಳಗ್ಗೆ ಕೆ. ಜಿ. ಹಳ್ಳಿ ಬಳಿ ಮಾಜಿ ಕಾರ್ಪೊರೇಟರ್ ಗಣೇಶ್ ರೆಡ್ಡಿ ಅವರು ಜಿಮ್​ಗೆ ಹೋಗುವಾಗ ದ್ಚಿಚಕ್ರ ವಾಹನದಲ್ಲಿ ಬಂದ ಇಬ್ಬರು ಖದೀಮರು ಯುವಕನೋರ್ವನಿಂದ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು. ಆಗ ಆತಂಕದಿಂದ ಯುವಕ ಕಳ್ಳ-ಕಳ್ಳ ಎಂದು ಚೀರಾಡಿದ್ದಾನೆ. ಇದನ್ನ ಗಮನಿಸಿದ ಗಣೇಶ್, ಕೂಡಲೇ ತಮ್ಮ ಕಾರಿನಲ್ಲಿ ಯುವಕನನ್ನು ಕೂರಿಸಿಕೊಂಡು ಖದೀಮರನ್ನ ಬೆನ್ನಟ್ಟಿದ್ದಾರೆ.‌ ಸುಮಾರು ಅರ್ಧ ಕಿ.ಮೀ ವರೆಗೂ ಬೆನ್ನಟ್ಟಿದ್ದಾರೆ. ತಪ್ಪಿಸಿಕೊಳ್ಳುವ ಭರದಲ್ಲಿ ಖದೀಮರು ದ್ಚಿಚಕ್ರವಾಹನದಿಂದ ಕೆಳಗೆ ಬಿದ್ದಿದ್ದಾರೆ.

ಮೊಬೈಲ್ ಕದ್ದೊಯ್ಯುತ್ತಿದ್ದವರನ್ನು ಬೆನ್ನಟ್ಟಿ ಹಿಡಿದ ಮಾಜಿ ಕಾರ್ಪೊರೇಟರ್ (ETV Bharat)

ಕಾರಿನಿಂದ ಕೆಳಗಿಳಿದ ಗಣೇಶ್​, ಮೊಬೈಲ್ ನೀಡದಿದ್ದರೆ ಪೊಲೀಸ್ ಠಾಣೆಗೆ ಅವರ ದ್ವಿಚಕ್ರ ವಾಹನವನ್ನು ಒಪ್ಪಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ನಂತರ ಖದೀಮರು ಕದ್ದ ಮೊಬೈಲ್ ನೀಡಿ ದ್ಚಿಚಕ್ರವಾಹನ ಪಡೆದು ಸ್ಥಳದಿಂದ ಕಾಲ್ಕಿತ್ತಿದ್ದಾರೆ.‌ ಘಟನೆ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ಕುರಿತು ಮಾಜಿ ಕಾರ್ಪೊರೇಟರ್ ಗಣೇಶ್ ರೆಡ್ಡಿ ಪ್ರತಿಕ್ರಿಯಿಸಿ, "ಇಂದು ಬೆಳಗ್ಗೆ 5.45 ಸುಮಾರಿಗೆ ಜಿಮ್ ಹೋಗುವಾಗ ಮಾರ್ಗ ಮಧ್ಯೆ ಯುವಕನೋರ್ವ ಬಂದು ದ್ಚಿಚಕ್ರವಾಹದಲ್ಲಿ ಬಂದ ಖದೀಮರು ನನ್ನ ಮೊಬೈಲ್ ಕಳ್ಳತನ ಮಾಡಿದ್ದಾರೆ ಎಂದು ಹೇಳಿದ. ಖದೀಮರು ಬೈಕ್​ನಲ್ಲಿ ಹೋಗುತ್ತಿರುವದನ್ನು ಗಮನಿಸಿದೆ. ಕೂಡಲೇ ಯುವಕನನ್ನ ಕಾರಿನಲ್ಲಿ ಕೂರಿಸಿಕೊಂಡು ಬೆನ್ನಟ್ಟಿದೆ. ಖದೀಮರು ಹೆಚ್​ಬಿಆರ್ ಬಡಾವಣೆಯ 8ನೇ ಅಡ್ಡರಸ್ತೆ ಬಳಿ ಅವರ ಬೈಕ್​ ಅನ್ನು ತಡೆದಿದ್ದರಿಂದ ಇಬ್ಬರು ಖದೀಮರು ಕೆಳಗೆ ಬಿದ್ದಿದ್ದಾರೆ. ಈ ಪೈಕಿ ಓರ್ವ ಚಾಕು ತೋರಿಸಿದ್ದ‌.‌ ಕೂಡಲೇ ಬಡವನ ಮೊಬೈಲ್ ಕದ್ದಿರುವುದನ್ನ ವಾಪಸ್ ನೀಡುವಂತೆ ಸೂಚಿಸಿದೆ. ಇಲ್ಲಿದ್ದರೆ ದ್ವಿಚಕ್ರ ವಾಹನ ಪೊಲೀಸರಿಗೆ ಒಪ್ಪಿಸುವುದಾಗಿ ಹೇಳಿದೆ‌. ಚಾಕು ಹಿಡಿದುಕೊಂಡು ಮೊಬೈಲ್ ಬಿಸಾಕಿ ವಾಹನ ತೆಗೆದುಕೊಂಡು ಪರಾರಿಯಾದರು" ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ ಉದ್ಯಮಿ ಮನೆಯಲ್ಲಿ ದರೋಡೆ: ಮನೆಯವರು, ಸೆಕ್ಯೂರಿಟಿ ಗಾರ್ಡ್ ಕೈಕಾಲು ಕಟ್ಟಿಹಾಕಿ ಕಳ್ಳತನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.