ಉಡುಪಿ: ಧಾರಾಕಾರ ಮಳೆಗೆ ಕೊಚ್ಚಿ ಹೋದ ಲೈಟ್ ಹೌಸ್ ಸಂಪರ್ಕಿಸುವ ಕಾಲು ದಾರಿ - Udupi Rain
🎬 Watch Now: Feature Video
ಕರಾವಳಿಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಪ್ರಸಿದ್ಧ ಲೈಟ್ ಹೌಸ್ಗೆ ಸಂಪರ್ಕ ಕಲ್ಪಿಸುತ್ತಿದ್ದ ಕಾಲು ದಾರಿ ಮಾರ್ಗ ಸಂಪೂರ್ಣ ಕೊಚ್ಚಿ ಹೋಗಿದೆ. ಕಾಪು ಬೀಚ್ನಲ್ಲಿ ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡಿರುವ ಲೈಟ್ ಹೌಸ್ನ ಹಿಂಭಾಗದಲ್ಲಿ ಸಮುದ್ರ ಮತ್ತು ನದಿ ನೀರಿನ ಸಂಗಮ ಪ್ರದೇಶವಿದ್ದು, ಮಳೆಯಿಂದಾಗಿ ನದಿ ಹರಿವಿನ ಸ್ವರೂಪವೇ ಬದಲಾಗಿದೆ. ನದಿ ಉಕ್ಕಿ ಹರಿದು ಲೈಟ್ ಹೌಸ್ ಮುಂಭಾಗದ ಮೂಲಕ ಸಮುದ್ರಕ್ಕೆ ಸೇರುತ್ತಿದೆ. ಈ ಹಿನ್ನೆಲೆ ಲೈಟ್ ಹೌಸ್ ಸಂಪರ್ಕ ಮಾರ್ಗ ಕಡಿತಗೊಂಡಿದೆ.