ಕೋವಿಡ್-19 ವಾರ್ ರೂಂ: ಸಾಮಾಜಿಕ ಜಾಲತಾಣ ಕೇಂದ್ರ ಹೇಗೆ ಕಾರ್ಯನಿರ್ವಹಿಸುತ್ತೆ ಗೊತ್ತೇ? - kovid- 19 war room
🎬 Watch Now: Feature Video
ರಾಜ್ಯ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಕೊರೊನಾ ತಡೆಗಟ್ಟಲು ಅನೇಕ ಕ್ರಮಗಳನ್ನು ಕೈಗೊಂಡಿವೆ. ಸದ್ಯ ಲಾಕ್‌ಡೌನ್ ಇರುವ ಕಾರಣ ಜನ್ರೆಲ್ಲಾ ಮನೆಯಲ್ಲಿಯೇ ಇದ್ದಾರೆ. ಹೀಗಾಗಿ ಜನರ ಸಮಸ್ಯೆಗಳನ್ನು ಸೋಷಿಯಲ್ ಮೀಡಿಯಾ ಮುಖಾಂತರ ತಿಳಿಸಲು ಸರ್ಕಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿದ್ದ ಜನಸ್ನೇಹಿ ಸಹಾಯ ವೇದಿಕೆಯನ್ನು ಸದ್ಯದ ಮಟ್ಟಿಗೆ ಕೋವಿಡ್ 19ಗಾಗಿ ಸಮರ್ಪಿಸಿದೆ. ಈ ಟೀಂ ಸಾರ್ವಜನಿಕರ ಕುಂದು ಕೊರತೆಗಳನ್ನು ಸ್ವೀಕರಿಸುವುದು, ಅವುಗಳನ್ನು ಸಂಬಂಧಿಸಿದ ಇಲಾಖೆಗೆ ರವಾನಿಸುವ ಕೆಲಸ ಮಾಡುತ್ತೆ. ಟ್ವಿಟರ್, ವಾಟ್ಸ್ ಆ್ಯಪ್ ಹಾಗೂ ಟೆಲಿಗ್ರಾಂ ಆ್ಯಪ್ಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತೆ. ಈ ಕುರಿತ ಪ್ರತ್ಯಕ್ಷ ವರದಿ ಇಲ್ಲಿದೆ.