ನಿರಂತರ ಮಳೆಗೆ ಕೊಣ್ಣೂರು - ರಾಮದುರ್ಗ ಸಂಪರ್ಕ ಸೇತುವೆ ಭಾಗಶಃ ಮುಳುಗಡೆ! - Heavy rain news 2020
🎬 Watch Now: Feature Video

ಗದಗ : ಹಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಜಿಲ್ಲೆಯಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಿದೆ. ಹಲವು ಹಳ್ಳ-ಕೊಳ್ಳ, ನದಿಗಳು ತುಂಬಿ ಹರಿಯಿತ್ತಿವೆ. ಮಲಪ್ರಭಾ ನದಿ ಭರ್ತಿಯಾಗಿದ್ದು ನದಿ ದಡದ ಗ್ರಾಮಗಳ ಜನರಲ್ಲಿ ಮತ್ತೆ ಪ್ರವಾಹದ ಆತಂಕ ಶುರುವಾಗಿದೆ. ಇನ್ನು ಭಾರಿ ಮಳೆಯಿಂದ ಕೊಣ್ಣೂರು - ಬದಾಮಿ ಕಿರು ಸೇತುವೆ ಸಹ ಮುಳುಗಡೆಯಾಗಿದೆ. ನರಗುಂದ ತಾಲೂಕಿನ ಬೆಳ್ಳೇರಿ ಗ್ರಾಮದ ಬಳಿ ಇರುವ ಕೊಣ್ಣೂರ ಮತ್ತು ರಾಮದುರ್ಗ ಸಂಪರ್ಕಿಸುವ ಸೇತುವೆ ಇದಾಗಿದ್ದು ಭಾಗಶಃ ಮುಳುಗಡೆಯಾಗಿದ್ದರಿಂದ ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇನ್ನು ದೊಡ್ಡ ಹಳ್ಳ ಸಹ ತುಂಬಿ ಹರಿಯುತ್ತಿರುವುದರಿಂದ ಸಾಕಷ್ಟು ಪ್ರಮಾಣದಲ್ಲಿ ಬೆಳೆ ನಾಶವಾಗಿದೆ ಎಂಬ ವರದಿ ಬಂದಿದೆ.