ರಾಣೆಬೆನ್ನೂರಲ್ಲಿ ಕೋಳಿವಾಡ ಗೆಲುವು ನಿಶ್ಚಿತ... ಎಸ್ ಆರ್ ಪಾಟೀಲ್ ಅಚಲ ವಿಶ್ವಾಸ - By-election 2019
🎬 Watch Now: Feature Video
ರಾಣೆಬೆನ್ನೂರು ಉಪ ಚುನಾವಣೆಯಲ್ಲಿ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಅವರು ಅತ್ಯಧಿಕ ಮತಗಳಿಂದ ಗೆಲ್ಲಲ್ಲಿದ್ದಾರೆ ಎಂದು ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಹೇಳಿದರು. ರಾಣೆಬೆನ್ನೂರ ಕ್ಷೇತ್ರದ ಉಪಚುನಾವಣೆಯ ಪ್ರಚಾರದಲ್ಲಿ ಮಾತನಾಡಿದ ಅವರು, ಕೋಳಿವಾಡರ ಗೆಲವು ಸೂರ್ಯ ಚಂದ್ರರಷ್ಟೇ ಸತ್ಯವಾಗಿದೆ, ಉಪಚುನಾವಣೆಯಲ್ಲಿ15 ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲವು ಸಾಧಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.